ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ತಾಯಿ ಸಾವು

10:45 AM, Monday, January 9th, 2017
Share
1 Star2 Stars3 Stars4 Stars5 Stars
(No Ratings Yet)
Loading...

jayanti-baligaಮಂಗಳೂರು: ಕಳೆದ ವರ್ಷ ಹತ್ಯೆಗೀಡಾಗಿದ್ದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ತಾಯಿ ಲಕ್ಷ್ಮೀ ಬಾಳಿಗ (82) ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

2016 ರ ಮಾರ್ಚ್‌ನಲ್ಲಿ ವಿನಾಯಕ ಬಾಳಿಗ ಅವರ ಹತ್ಯೆಯಾಗಿತ್ತು. ಪುತ್ರನ ಹತ್ಯೆಯಾದ ನಂತರ ಖಿನ್ನತೆಗೆ ಒಳಗಾಗಿದ್ದ ಅವರು ಇಂದು ಮುಂಜಾನೆ ತೀವ್ರ ಅಸೌಖ್ಯದಿಂದ ಕುಸಿದು ಬಿದ್ದಿದ್ದರು.

ಅವರನ್ನು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ನಿಧನರಾಗಿದ್ದಾರೆ.

ಸೋಮವಾರ ಬೆಳಿಗ್ಗೆ 10 ಗಂಟೆಗೆ ಲಕ್ಷ್ಮೀ ಬಾಳಿಗ ಅವರ ಪಾರ್ಥಿವ ಶರೀರವನ್ನು ಮನೆಗೆ ತರಲಾಗುವುದೆಂದು ಕುಟುಂಬ ಮೂಲಗಳು ತಿಳಿಸಿವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English