ಮಂಗಳೂರು: ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಗುಡ್ಡ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಹೆಣವಾಗಿದ್ದ ಉಮೇಶ್ ಶೆಟ್ಟಿ(29 ವರ್ಷ) ಯನ್ನು ಕೋಟಿ ಆಸೆಗಾಗಿ ಆತನ ಗೆಳೆಯರೇ ಕೊಂದಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಗೆಯಿಂದ ಬೆಳಕಿಗೆ ಬಂದಿದೆ.
ಆರೋಪಿಗಳಲ್ಲಿ ನಾಲ್ವರು ಉಮೇಶ್ ಶೆಟ್ಟಿಯ ಸ್ನೇಹಿತರಾಗಿದ್ದು, ಕೊಲೆಯಲ್ಲಿ ರಾಜೇಶ್ ಶೆಟ್ಟಿ ಪ್ರಕರಣದ ಸೂತ್ರದಾರ ಎಂದು ತಿಳಿದು ಬಂದಿದೆ. ರಾಜೇಶ್ ಶೆಟ್ಟಿ ಹಾಗೂ ಉಮೇಶ್ ಶೆಟ್ಟಿ ಆತ್ಮೀಯ ಮಿತ್ರರಾಗಿದ್ದು, ಎಂಆರ್‌ಪಿಲ್‌ನಲ್ಲಿ ಕೆಲಸ ಮಾಡಿಕೊಂಡು ಕಲ್ಲಿನ ಕೋರೆ ಉದ್ಯಮವನ್ನು ಮಾಡಲು ಚಿಂತನೆ ನಡೆಸಿದ್ದರು.
ಮೂರು ವರ್ಷದ ಹಿಂದೆ ಮುಂಬೈನಿಂದ ಊರಿಗೆ ಆಗಮಿಸಿ ಕಳೆದ ಕೆಲವು ತಿಂಗಳಿನಿಂದ ಪಣಂಬೂರಿನ ಟ್ರಾನ್ಸ್‌ಪೋರ್ಟ್ ಉದ್ಯಮದಲ್ಲಿ ಪಾಲುದಾರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಒಂದು ವಾರದ ಹಿಂದೆ ತನ್ನ ಗೆಳೆಯರೊಂದಿಗೆ ಸೇರಿ ಕೋರೆ ಉದ್ಯಮವನ್ನು ಪ್ರಾರಂಭಿಸುವ ಇರಾದೆಯಿದೆ ಎಂದು ತಿಳಿಸಿದ್ದರು. ಈ ಮಧ್ಯೆ ನೋಟ್ ನಿಷೇಧದ ಸಂದರ್ಭದಲ್ಲಿ ಉಮೇಶ್ ಹಣವನ್ನು ಮಿತ್ರರ ಕೈಯಲ್ಲಿ ಕೊಟ್ಟಿದ್ದರು. ಇದರಿಂದಲೇ ವ್ಯಾಪಾರ ಮುಂದುವರಿಸುವ ಬಗ್ಗೆಯೂ ಮಾತುಕತೆಯಾಗಿತ್ತು. ಆದರೆ ಮಿತ್ರ ದ್ರೋಹಿಗಳು ಉಮೇಶ್ ಶೆಟ್ಟಿಯನ್ನು ಮುಗಿಸಲು ಹೊಂಚು ಹಾಕಿದ್ದರು.
ಡಿಸೆಂಬರ್ 28 ರಂದು ಸಂಜೆ ಪಕ್ಷಿಕೆರೆ ಬಳಿ ಬಸ್ಸಿನಿಂದ ಇಳಿದಿದ್ದ ಉಮೇಶ್ ಶೆಟ್ಟಿಯನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ಬಳಿಕ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ನಿರ್ಜನ ಗುಡ್ಡ ಪ್ರದೇಶದಲ್ಲಿ ನಾಲ್ವರು ಸೇರಿ ಮಿತ್ರನನ್ನು ಕೊಲೆ ಮಾಡಿದ್ದಾರೆ. ಕೊಲೆ ಮಾಡುವ ಸಂದರ್ಭದಲ್ಲಿ ಉಮೇಶ್ ಶೆಟ್ಟಿಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದು, ಉಮೇಶ್ ಶೆಟ್ಟಿ ಮುಖದಲ್ಲಿ ಪರಚಿರುವ ಗಾಯಗಳು ಪತ್ತೆಯಾಗಿದ್ದವು. ನಿರ್ದಯಿಗಳಾದ ಮಿತ್ರರು ಕೊಲೆ ಮಾಡಿ ಪರಾರಿಯಾಗಿದ್ದರು. ಆದ್ರೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಅಂದರ್ ಆಗಿದ್ದಾರೆ.
Click this button or press Ctrl+G to toggle between Kannada and English