ಕತ್ತಲ್‌ಸಾರ್‌ ಬಳಿ ಎರಡು ತಲೆ, ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರು

1:38 PM, Monday, January 16th, 2017
Share
1 Star2 Stars3 Stars4 Stars5 Stars
(No Ratings Yet)
Loading...

Cow-calfಮಂಗಳೂರು: ಮಂಗಳೂರಿನ ಬಜ್ಪೆ ಸಮೀಪದ ಕತ್ತಲ್‌ಸಾರ್‌ನ ಗುರುಂಪೆ ನಿವಾಸಿ ಹೇಮನಾಥ ಶೆಟ್ಟಿ ಎಂಬುವರ ಮನೆಯಲ್ಲಿ ಹಸುವೊಂದು ಎರಡು ತಲೆ, ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರುವೊಂದಕ್ಕೆ ಜನ್ಮ ನೀಡಿದೆ.

8 ವರ್ಷಗಳ ಹಿಂದೆ ತಂದ ದನವೊಂದು ಎರಡು ಬಾರಿ ಕರು ಹಾಕಿದ್ದು, ಇದೀಗ ಶುಕ್ರವಾರದಂದು ಮೂರನೇ ಕರುವಿಗೆ ಜನ್ಮ ನೀಡಿದೆ. ಆದರೆ ಈ ಕರುವಿಗೆ ಎರಡು ತಲೆ, ನಾಲ್ಕು ಕಣ್ಣು, ಮೂರು ಕಿವಿಗಳಿದ್ದು, ಒಂದೇ ದೇಹವಿದೆ. ಎರಡೂ ತಲೆಯ ಭಾಗ ಕೂಡಿಕೊಂಡಿದೆ. ಕರುವಿಗೆ ಬಾಟಲ್ ಮೂಲಕ ಮನೆಯವರು ಹಾಲುಣಿಸುತ್ತಿದ್ದಾರೆ.

ಇನ್ನು ಈ ವೈಶಿಷ್ಟ್ಯವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English