ಕಾಸರಗೋಡು : ಕೇರಳ ರಾಜ್ಯದಲ್ಲಿ ಡೀಸೆಲ್ ಮತ್ತು ಬಿಡಿ ಭಾಗಗಳ ಬೆಲೆಯೇರಿಕೆಯ ಬಿಸಿ ಖಾಸಗಿ ಬಸ್ ಮಾಲಕರಿಗೆ ತಟ್ಟಿದ್ದು ಅನಿವಾರ್ಯವಾಗಿ ಪ್ರಯಾಣ ದರವನ್ನು ಆ.8 ಏರಿಸಲಾಗುವುದು ಎಂದು ಕೇರಳ ಬಸ್ ಮಾಲಕರ ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ.
ಸಾಮಾನ್ಯ ಬಸ್‌ಗಳಲ್ಲಿ ಕನಿಷ್ಠ ಪ್ರಯಾಣ ದರ 4 ರೂ.ನಿಂದ 5 ಕ್ಕೆ ಏರಲಿದೆ. ಫಾಸ್ಟ್ ಪ್ಯಾಸೆಂಜರ್ ಬಸ್ ಪ್ರಯಾಣ ದರವನ್ನು 5 ರೂ.ನಿಂದ 7 ರೂ. ಗೆ ಏರಿಸಲಾಗಿದೆ. ಕನಿಷ್ಠ ದರದಲ್ಲಿ ಪ್ರಯಾಣಿಸುವ ಕಿಲೋಮೀಟರ್ ಮಿತಿಯನ್ನು ಎರಡೂವರೆ ಕಿ.ಮೀ.ನಿಂದ ಐದು ಕಿ.ಮೀ.ಗೆ ಹೆಚ್ಚಿಸಲಾಗಿದೆ.
ವಿದ್ಯಾರ್ಥಿಗಳ ಪ್ರಯಾಣ ದರ ಏರಿಸಿಲ್ಲ. ವಿದ್ಯಾರ್ಥಿಗಳ ಕನಿಷ್ಠ ದರ ಎರಡೂವರೆ ಕಿ.ಮೀ.ಗೆ 50 ಪೈಸೆಯಾಗಿ ಮುಂದುವರಿಯಲಿದೆ. ಸಾಮಾನ್ಯ ಬಸ್‌ಗಳಲ್ಲದೆ ಲಿಮಿಟೆಡ್ ಸ್ಟಾಫ್ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಲಭಿಸಲಿದೆ. ವಿದ್ಯಾರ್ಥಿಗಳಿಗೆ ಮೊದಲು ಎರಡೂವರೆ ಕಿ.ಮೀ.ಗೆ 50 ಪೈಸೆ, 7.5 ಕಿ.ಮೀ.ಗೆ 1 ರೂ., 12.5 ಕಿ.ಮೀ.ಗೆ 1.50 ರೂ.ನಿಗದಿಪಡಿಸಲಾಗಿದೆ.
ಮಂಗಳೂರು ಕಾಸರಗೋಡಿನ ನಿತ್ಯ ಪ್ರಯಾಣಿಕರಿಗೆ ಈ ಹೊರೆ ಬೀಳಲಿದ್ದು. ಹಿಂದಿನ ದರಕ್ಕಿಂತ ರೂ. ೨ ರಿಂದ ೫ ರೂ ಏರಿಕೆಯಾಗಲಿದೆ. ಇದರಿಂದ ಪ್ರಯಾಣಿಕ ಸಂಖ್ಯೆ ಕಡಿಮೆಯಾಗಲಿದ್ದು ರೈಲಿನಲ್ಲಿ ಮತ್ತೆ ನೂಕು ನುಗ್ಗಲು ಉಂಟಾಗಲಿದೆ.
ಏರಿಕೆಯಾಗಿರುವ ಬಸ್‌ದರ ಹೀಗಿದೆ
ಹಾಲಿ ದರ ಹೊಸ ದರ
2.5 ಕಿ.ಮೀ 4 ರೂ. 5 ರೂ.
5 ಕಿ.ಮೀ 4.50 ರೂ. 5 ರೂ.
7.5 ಕಿ.ಮೀ 5 ರೂ 6 ರೂ.
10 ಕಿ.ಮೀ 5.50 ರೂ. 8 ರೂ.
12.5 ಕಿ.ಮೀ 7 ರೂ. 9 ರೂ
15 ಕಿ.ಮೀ 8.50 ರೂ. 11 ರೂ.
17.5 ಕಿ.ಮೀ 10 ರೂ. 12 ರೂ.
20 ಕಿ.ಮೀ 11 ರೂ. 13 ರೂ.
22.5 ಕಿ.ಮೀ 12.50 ರೂ. 15 ರೂ.
25 ಕಿ.ಮೀ 14 ರೂ. 16 ರೂ.
27.5 ಕಿ.ಮೀ 15 ರೂ. 17 ರೂ.
Click this button or press Ctrl+G to toggle between Kannada and English