ಮಂಗಳೂರು ಜನತೆಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಹೊಸ ನಿರ್ಧಾರ

3:50 PM, Monday, January 16th, 2017
Share
1 Star2 Stars3 Stars4 Stars5 Stars
(No Ratings Yet)
Loading...

arabian seaಮಂಗಳೂರು: ಸಮರ್ಪಕ ಮಳೆ ಇಲ್ಲದೆ ಈ ಬಾರಿ ಕರಾವಳಿ ಕಂಗೆಟ್ಟಿದೆ. ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಎಪ್ರಿಲ್ ಮೇ ತಿಂಗಳಲ್ಲಿ ಕುಡಿಯುವ ನೀರನ್ನು ನಗರದ ಜನತೆಗೆ ನೀಡಲು ಮಂಗಳೂರು ಮಹಾನಗರ ಪಾಲಿಕೆ ಹರಸಾಹಸ ಪಡುತ್ತಿದೆ.

ಜಿಲ್ಲೆಯ ಜೀವನದಿ ನೇತ್ರಾವತಿ ನದಿಯ ನೀರನ್ನು ವರ್ಷಪೂರ್ತಿ ಯಥೇಚ್ಛವಾಗಿ ಬಳಸಲು ಸಾಧ್ಯವಿಲ್ಲ. ಸದ್ಯಕ್ಕೆ ನಗರಕ್ಕೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸನಿಹದಲ್ಲಿಯೇ ಇರುವ ಅಗಾಧ ನೀರಿನ ರಾಶಿ ಅರಬ್ಬಿ ಸಮುದ್ರದ ನೀರನ್ನು ಶುದ್ಧಿಕರಿಸಿ ಬಳಸಲು ಚಿಂತನೆ ನಡೆಸುತ್ತಿದೆ.

ಸಮುದ್ರದ ನೀರು ಉಪ್ಪಾಗಿರುವುದರಿಂದ ಇದನ್ನು ಕುಡಿಯಲು ಬಳಸಲು ಸಾಧ್ಯವಿಲ್ಲ. ಆದರೆ ಗಲ್ಫ್ ದೇಶಗಳಲ್ಲಿ ಸಮುದ್ರ ನೀರನ್ನೆ ಸಂಸ್ಕರಿಸಿ ಕುಡಿಯುವ ನೀರಾಗಿ ಜನರಿಗೆ ನೀಡಲಾಗುತ್ತಿದೆ. ಚೆನ್ನೈಯಲ್ಲಿಯೂ ಇದೇ ರೀತಿಯ ಪ್ರಯೋಗ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿಯು ಅರಬ್ಬಿ ಸಮುದ್ರದ ನೀರನ್ನು ಕುಡಿಯಲು ಅನುಕೂಲವಾಗುವಂತೆ ಸಂಸ್ಕರಿಸಲು ಸಾಧ್ಯವಾಗುವ ಯೋಜನೆಯನ್ನು ರೂಪಿಸಲು ನಗರಾಭಿವೃದ್ಧಿ ಸಚಿವರು ಪ್ರಸ್ತಾವನೆ ಕಳುಹಿಸಲು ಸೂಚಿಸಿದ್ದಾರೆ.

ಈ ನಿಟ್ಟಿನಲ್ಲಿ ಮನಪಾ ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದೆ. ಸಮುದ್ರದ ನೀರನ್ನು ಸಿಹಿ ಮಾಡಲು ಬೇಕಾದ ಯೋಜನೆಗೆ ದೊಡ್ಡ ಮಟ್ಟದ ಖರ್ಚು ಆಗುವುದಿಲ್ಲ ಮತ್ತು ಅದಕ್ಕೆ ಸಮುದ್ರ ತೀರದಲ್ಲಿರುವ ಜಾಗವೇ ಸಾಕು ಎಂಬುದು ಮನಪಾ ಲೆಕ್ಕಾಚಾರ.

ಮಂಗಳೂರು ಜನತೆಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕೈಗೊಳ್ಳುತ್ತಿರುವ ಈ ಯೋಜನೆ ಸಫಲವಾದರೆ ಮಂಗಳೂರಿನಲ್ಲಿ ಎಪ್ರಿಲ್ ಮೇ ತಿಂಗಳಲ್ಲಿ ಕಾಣಿಸಿಕೊಳ್ಳುವ ನೀರಿನ ಬರ ಪರಿಹಾರಗೊಳ್ಳಬಹುದು. ಈ ಪ್ರಯತ್ನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಪ್ರಯೋಜನವಾಗಬಹುದು ಎಂದು ಅಂದಾಜಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English