ಮಂಗಳೂರು: ಕರ್ನಾಟಕದಲ್ಲಿ ಪಕ್ಷದೊಳಗೆ ಅಲ್ಪಸ್ವಲ್ಪ ಭಿನ್ನಾಭಿಪ್ರಾಯವಿದ್ದರೂ ಕೆಲವೊಂದು ಮಂದಿ ಅದನ್ನು ದೊಡ್ಡದಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪಕ್ಷದ ವರಿಷ್ಠರು ಈ ಸಮಸ್ಯೆಯನ್ನು ಅರ್ಧ ಗಂಟೆಯೊಳಗೆ ಬಗೆಹರಿಸುತ್ತಾರೆ. ಇದೊಂದು ದೊಡ್ಡ ಸಮಸ್ಯೆಯೇ ಅಲ್ಲ.
ಶೀಘ್ರವೇ ಬಗೆಹರಿಯಲಿದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಅವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಂಜಾಬ್, ಗುಜರಾತ್, ಉತ್ತರಪ್ರದೇಶ, ಗೋವಾ ಚುನಾವಣೆ ಸಮೀಪಿಸುತ್ತಿದೆ. ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ. ಪ್ರಧಾನಿ ಮೋದಿ ಅವರ ಭ್ರಷ್ಟಾಚಾರ ಮುಕ್ತ ಆಡಳಿತ, ಅವರು ಜಾರಿಗೆ ತಂದ ಯೋಜನೆಗಳು, ನೋಟು ಅಪಮೌಲಿÂàಕರಣಗಳಿಗೆ ಜನ ಸಾಮಾನ್ಯರು ಬಹಳಷ್ಟು ಬೆಂಬಲ ನೀಡಿರುವುದರೊಂದಿಗೆ ಬಿಜೆಪಿ ಕಡೆ ಒಲವು ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶದ ರಾಜಕೀಯ ವಿದ್ಯಮಾನಗಳು ಹಾಗೂ ಪಂಜಾಬಿನಲ್ಲಿ ನಡೆಯುತ್ತಿರುವ ಘಟನೆಗಳು ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಖಚಿತಪಡಿಸುತ್ತವೆ ಎಂದರು.
ಮಿತಿ ಹೆಚ್ಚಳ ಸ್ವಾಗತಾರ್ಹ: ಕೇಂದ್ರ ಸರಕಾರ 500 ರೂ. ಹಾಗೂ 1,000 ರೂ. ಬೆಲೆಯ ನೋಟುಗಳನ್ನು ಅಪಮೌಲಿಕರಣ ಗೊಳಿಸಿದ ಬಳಿಕ ಪ್ರಧಾನಿ ಮೋದಿ ಹಂತ ಹಂತವಾಗಿ ಸುಧಾರಣೆ ಮಾಡುತ್ತಾ ಬಂದಿದ್ದಾರೆ. ಉಳಿತಾಯ ಖಾತೆಯಲ್ಲಿ ಹಣದ ಹಿಂದೆಗೆತದ ಪ್ರಮಾಣವನ್ನು ವಾರಕ್ಕೆ 10,000 ರೂ. ಹಾಗೂ ಚಾಲ್ತಿ ಖಾತೆಯಲ್ಲಿ ಹಣ ಹಿಂದೆಗೆದ ಪ್ರಮಾಣವನ್ನು 1 ಲಕ್ಷ ರೂ. ವರೆಗೆ ಏರಿಕೆ ಮಾಡಿರುವುದು ಸ್ವಾಗತಾರ್ಹ ಕ್ರಮ. ಇದರಿಂದ ಮತ್ತಷ್ಟು ಸಮಸ್ಯೆ ಬಗೆಹರಿಯಲಿವೆ ಹಾಗೂ ಜನಸಾಮಾನ್ಯರಿಗೂ ಬಹಳಷ್ಟು ನೆರವಾಗಲಿದೆ ಎಂದರು.
Click this button or press Ctrl+G to toggle between Kannada and English