ಮಂಗಳೂರು: ಉರ್ವದಲ್ಲಿ 12 ಕೋಟಿ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ನಿರ್ಮಾಣಗೊಳ್ಳಲಿರುವ ಜಿಲ್ಲಾ ಅಂಬೇಡ್ಕರ್ ಭವನ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಮಂಗಳವಾರ ಶಿಲಾನ್ಯಾಸವನ್ನು ನೆರವೇರಿಸಿದರು.’
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಪ್ರಸಕ್ತ ರಾಜ್ಯದಲ್ಲಿ 560 ವಸತಿ ಶಾಲೆಗಳಿವೆ. ಆದರೂ ದಲಿತರು ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನೆಲೆಯಲ್ಲಿ ವಸತಿ ಶಾಲೆಗಳನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ’ ಎಂದು’ಸಚಿವ ಆಂಜನೇಯ ತಿಳಿಸಿದರು.
ಬಡ ಹಾಗೂ ನಿರಕ್ಷರರಿರುವ ದೇಶಕ್ಕಾಗಿಯೇ ಇಡೀ ಜೀವನ ಮುಡುಪಾಗಿಟ್ಟ ಅಂಬೇಡ್ಕರ್ ನಿಜವಾದ ದೇಶಭಕ್ತ ಅವರು ಕೇವಲ ದಲಿತರನ್ನು ಮಾತ್ರವೇ ಉದ್ಧರಿಸಿಲ್ಲ. ಈ ಸಮಾಜದ ಶೋಷಿತರಿಗೆ ಬೆಳಕು ನೀಡಿದ್ದಾರೆ. ಯಾವ ಸಮುದಾಯಕ್ಕೆ ಶಿಕ್ಷಣ, ಸಂಘಟನೆಯ ಮನೋಭಾವವಿಲ್ಲವೋ ಆ ಸಮಾಜ ಕ್ಷೀಣಿಸುತ್ತದೆ ಎಂದರು.
ಸರ್ಕಾರ 3.5 ಲಕ್ಷ ರೂ. ಯೋಜನೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಮನೆಕಟ್ಟುವ ಯೋಜನೆಯೂ ಶೀಘ್ರದಲ್ಲಿ ಜಾರಿಯಾಗಲಿದೆ. ರಾಜ್ಯದಲ್ಲೇ ದಲಿತರಿಗೆ ಅತ್ಯುನ್ನತವಾದ ಹೈಟೆಕ್ ರೆಸಿಡೆನ್ಸಿಯಲ್ ಸ್ಕೂಲ್ ಆರಂಭಗೊಳ್ಳುತ್ತಿದೆ. ಇದಲ್ಲದೆ, ಎಲ್ಲಾ ಸಮುದಾಯಕ್ಕೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಸಮುದಾಯ ಭವನಗಳನ್ನು ನಿರ್ಮಿಸುತ್ತಿದೆ. ಮಂಗಳೂರಿನ ಬಗ್ಗೆ ತನಗೆ ಅಪಾರ ಪ್ರೀತಿ ಇದೆ. ಇಲ್ಲಿನ ನಾಯಕರಾದ ಆಸ್ಕರ್ ಫರ್ನಾಂಡಿಸ್, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ತಮ್ಮ ರಾಜಕೀಯ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಯು.ಟಿ. ಖಾದರ್, ಶಾಸಕ ಜೆ. ಆರ್. ಲೋಬೊ, ವಿಧಾನ ಪರಿಷತ್ ಸಚೇತಕ ಐವನ್ ಡಿಸೋಜ, ಮೇಯರ್ ಹರಿನಾಥ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English