ಮಂಗಳೂರು ವಿವಿ ಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠ ಉದ್ಘಾಟನೆ

9:21 PM, Thursday, January 19th, 2017
Share
1 Star2 Stars3 Stars4 Stars5 Stars
(4 rating, 1 votes)
Loading...

cm university college ಮಂಗಳೂರು: ನಾರಾಯಣ ಗುರು ಅಧ್ಯಯನ ಪೀಠಕ್ಕೆ ಈಗಾಗಲೇ ಸರ್ಕಾರ ಒಂದು ಕೋಟಿ ರೂ. ಅನುದಾನ ನೀಡಿದ್ದು, ಇನ್ನೂ ಒಂದು ಕೋಟಿ ರೂ. ಒದಗಿಸಲು ಸಿದ್ಧವಿದೆ . ಕ್ರಿಯಾಶೀಲ ಹಾಗೂ ಹೆಚ್ಚು ಅಧ್ಯಯನಗಳನ್ನು ನಡೆಸುವ ಪೀಠಗಳಿಗೆ ಸರ್ಕಾರ ಅನುದಾನ ನೀಡಲಿದೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠ, ಪ್ರಸಾರಾಂಗದ ರಜತ ಗ್ರಂಥ ಸರಣಿಯ 19 ಕೃತಿಗಳ ಲೋಕಾರ್ಪಣೆ ಹಾಗೂ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ನೂತನ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಸಲಹೆಯ ಮೇರೆಗೆ ಅಧ್ಯಯನ ಪೀಠಗಳು ವಾರ್ಷಿಕ ಅನುದಾನಗಳ ಮೂಲಕ ಬಡ್ಡಿ ಪೀಠವಾಗದೆ, ಸಾಂಕೇತಿಕ ಪೀಠವಾಗದೆ ಸಾರ್ಥಕ ಪೀಠವಾಗಬೇಕೆಂದರು.

ವೈಚಾರಿಕ, ವೈಜ್ಞಾನಿಕ ಶಿಕ್ಷಣದಿಂದ ಮಾತ್ರವೇ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಯುವಕರು ಆದಷ್ಟು ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಬೇಕೆಂದರು. ಅಸ್ಪೃಶ್ಯತೆ ಎಂಬುದು ಮನೋರೋಗ ಎಂದ ಮುಖ್ಯಮಂತ್ರಿಗಳು, ಇದು ಮನುಷ್ಯರಿಂದಲೇ ಹುಟ್ಟಿದೆ ಎಂದರು.

ಬ್ರಹ್ಮಶ್ರೀ ನಾರಾಯಣಗುರು ಅವರು ಕೇರಳ ರಾಜ್ಯ ಇಂತಹ ಮನೋರೋಗದಿಂದ ಬಳಲುತ್ತಿದ್ದಾಗಲೇ ಅತ್ಯಂತ ಸೌಮ್ಯ ರೀತಿಯಲ್ಲೇ ಇಡೀ ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದರು. ಯಾವುದೇ ಧರ್ಮದ ಹುಳುಕುಗಳನ್ನು ತಿದ್ದಲು ಧರ್ಮ ಬಿಡಬೇಕಿಲ್ಲ. ಸ್ವಾಮಿ ವಿವೇಕಾನಂದರೂ ತಮ್ಮ ಮೂಲ ಧರ್ಮದಲ್ಲಿದ್ದುಕೊಂಡೇ ಧರ್ಮದ ಲೋಪದೋಷಗಳನ್ನು ತಿದ್ದಿದ್ದಾರೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English