ಮಂಗಳೂರು: ದೆಹಲಿಯಲ್ಲಿ ನಡೆದ 13 ನೇ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಇಬ್ಬರು ಮಕ್ಕಳು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
15ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಿರಂಜನ್ ರಾಜೀವ್ ಮತ್ತು 13ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಆಶೆಲ್ ಡಿಸಿಲ್ವಾ ಚಿನ್ನದ ಪದಕ ಪಡೆದು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ನಿರಂಜನ್ ರಾಜೀವ್ ಮಂಗಳೂರಿನ ಬಿಜೈ ಲೂಡರ್ಸ್ ಸೆಂಟ್ರಲ್ ಸ್ಕೂಲ್ ನ 8 ನೇ ತರಗತಿ ವಿದ್ಯಾರ್ಥಿ. ಆಶೆಲ್ ಡಿಸಿಲ್ವಾ ಮಂಗಳೂರಿನ ಕೇಂಬ್ರಿಡ್ಜ್ ಶಾಲೆಯ 7 ನೇ ತರಗತಿ ವಿದ್ಯಾರ್ಥಿನಿ. ಈ ಇಬ್ಬರೂ ಪ್ರಸ್ತುತ ಶಾರ್ಟ್ ಟ್ರ್ಯಾಕ್ ಐಸ್ ಸ್ಕೇಟಿಂಗ್‌ನ ರಾಷ್ಟ್ರೀಯ ತರಬೇತುದಾರ ಅವಧೂತ್ ತವಡೆ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಚಿನ್ನದ ಪದಕ ವಿಜೇತೆ ಆಶೆಲ್ ಡಿಸಿಲ್ವಾ ಅವರ ಸಹೋದರ ಅಶ್ವಿನ್ ಡಿಸಿಲ್ವಾ ಈ ತಿಂಗಳಾಂತ್ಯದ ವೇಳೆಗೆ ಆಸ್ಟ್ರಿಯಾದಲ್ಲಿ ನಡೆಯಲಿರುವ ‘ವರ್ಲ್ಡ್ ಜ್ಯೂನಿಯರ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Click this button or press Ctrl+G to toggle between Kannada and English