ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಬಿಎಸ್‍ಡಬ್ಲ್ಯು ವಿಭಾಗದ ವತಿಯಿಂದ ಆಳ್ವಾಸ್ ರೀಜ್-2017 ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಮೈಸೂರು ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಹಾಗೂ ಪೌಷ್ಠಿಕಾಂಶ ವಿಭಾದ ಪ್ರಾಧ್ಯಾಪಕಿ ಡಾ.ಜಮುನಾ ಪ್ರಕಾಶ್ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ, ಮೂರು ತಲೆಮಾರುವಿಗೆ ಪರೋಕ್ಷವಾಗಿ ಕೊ0ಡಿಯಾಗಿರುವ ಮಹಿಳೆ, ಆರೋಗ್ಯವಂತ ಸಮಾಜಕ್ಕೆ ತನ್ನ ಕುಟುಂಬದ ಆರೈಕೆ ಮೂಲಕ ಕೊಡುಗೆ ನೀಡುತ್ತಾಳೆ. ಇಡೀ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಮಹಿಳೆ ತನ್ನ ಆರೋಗ್ಯದ ಗಮನಹರಿಸುವಲ್ಲಿ ಸೋಲುತ್ತಿದ್ದಾಳೆ.
ಅಭಿವೃದ್ಧಿಯಲ್ಲಿ ಹಿಂದುಳಿದ ದೇಶಗಳಿಗೆ ಹೋಲಿಸಿದರೂ ನಮ್ಮ ದೇಶದಲ್ಲಿ ಸರ್ಕಾರವು ಮಹಿಳೆಯ ಆರೋಗ್ಯಕ್ಕೆ ಮೀಸಲಿಟ್ಟಿರುವ ಅನುದಾನ ತೀರ ಕಡಿಮೆ. ಗಂಡು ಮತ್ತು ಹೆಣ್ಣು ಮಕ್ಕಳಿಗೆ ನೀಡುವ ಆಹಾರ, ಆರೋಗ್ಯದ ಬಗೆಗಿನ ಕಾಳಜಿಯಲ್ಲಿ ವ್ಯತ್ಯಾಸಗಳಾಗುತ್ತಿದ್ದು, ಹೆಣ್ಣು ಮಕ್ಕಳೆಡೆಗಿನ ತಾತ್ಸರ ಭಾವನೆ ಹೆಚ್ಚಾಗುತ್ತಿದೆ. ವಿದ್ಯಾವಂತರು ಇಂತಹ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಶ್ರಮಿಸಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿ, ಬಿಎಸ್‍ಡಬ್ಲ್ಯು ಹಾಗೂ ಬಿವಿಎ ವಿಭಾಗದ ವಿದ್ಯಾರ್ಥಿಗಳು ನೀರಿನ ಸಂರಕ್ಷಣೆಯ ಕುರಿತು ಹೊರತಂದ `ಡ್ರಾಪ್’ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದರು. ಸಮಾಜದಲ್ಲಿ ಸಮಾನತೆಯ ವಿಚಾರವು ಕೇವಲ ವಿಚಾರ ಸಂಕಿರಣಗಳಿಗೆ ಸೀಮಿತವಾಗದೆ ಕ್ರೀಯಾಶೀಲವಾಗಿ ಮಹಿಳೆಯ ಆರೋಗ್ಯ ಹಾಗೂ ರಕ್ಷಣೆಯ ಬಗ್ಗೆ ನಿಗಾವಹಿಸಬೇಕು. ವಿದ್ಯಾವಂತ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡ ಸಮಾಜದಲ್ಲಿ ಸಮಾನತೆಗೆ ಹೆಚ್ಚಿನ ಒತ್ತು ನೀಡಬೇಕು. ರಕ್ತಹೀನತೆಯಂತಹ ವಿಚಾರಗಳನ್ನು ಸೂಕ್ಷವಾಗಿ ಗಮನಿಸಬೇಕು ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಬಿಎಸ್‍ಡಬ್ಲ್ಯು ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲ, ಕಾರ್ಯಕ್ರಮದ ಸಂಯೋಜಕಿ ಸಪ್ನಾ, ಸ್ಪಟಿಕಾ ಫೋರಂನ ಸಂಯೋಜಕ ಮೇಘಚಂದ್ರ, ಕೃಪಾ ಕೈಲಾರ್ ಉಪಸ್ಥಿತರಿದ್ದರು.
ನಿತ್ಯಾನಂದ ಹಾಗೂ ರಝೀಯಾ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English