ಮೂಡುಬಿದಿರೆ: 2016 ಮೇ ತಿಂಗಳಲ್ಲಿ ನಡೆದ ಮಂಗಳೂರು ವಿ.ವಿ ಪದವಿ ಪರೀಕ್ಷೆಯ ರ್ಯಾಂಕ್ ಪ್ರಕಟಗೊಂಡಿದ್ದು, ಮೂಡುಬಿದಿರೆಯ ಆಳ್ವಾಸ್ ಪದವಿ ಕಾಲೇಜಿನ 21 ವಿದ್ಯಾರ್ಥಿಗಳು ರ್ಯಾಂಕ್ ಪಡೆಯುವುದರ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಆಳ್ವಾಸ್ ಕಾಲೇಜು ಕಳೆದ ಮೂರು ವರ್ಷಗಳಲ್ಲಿ ಸರಾಸರಿ ಮೂವತ್ತಕ್ಕೂ ಹೆಚ್ಚು ರ್ಯಾಂಕ್‍ಗಳನ್ನು ಪಡೆಯುವುದರೊಂದಿಗೆ ದಾಖಲೆ ಮೆರೆದಿದೆ.
ವಿವಿಧ ವಿಭಾಗಗಳಲ್ಲಿ ಒಟ್ಟು ಆರು ಪ್ರಥಮ ರ್ಯಾಂಕ್‍ಗಳು ಆಳ್ವಾಸ್ ಪಾಲಾಗಿದೆ. ಮೂವರು ದ್ವಿತೀಯ ರ್ಯಾಂಕ್, ಐವರು ತೃತೀಯ ರ್ಯಾಂಕ್, ಇಬ್ಬರು 5ನೇ ರ್ಯಾಂಕ್, ಇಬ್ಬರು ಆರನೇ ರ್ಯಾಂಕ್, ಒಬ್ಬ ವಿದ್ಯಾರ್ಥಿ 8ನೇ ರ್ಯಾಂಕ್, ಇಬ್ಬರು ವಿದ್ಯಾರ್ಥಿಗಳು ಹತ್ತನೇ ರ್ಯಾಂಕ್ ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ.
ಭಾವನಾ ರಾಜ್(ಬಿಎಚ್‍ಆರ್‍ಡಿ), ಶಿಖಾ ಎ.ಎಸ್(ಎಫ್‍ಎನ್‍ಡಿ), ನಿಖಿಲ್ ವಿ.ಕೆ(ಬಿಎಚ್‍ಎಸ್), ರೆನಿಟಾ ಫೆರ್ನಾಂಡಿಸ್(ಬಿಬಿಎಂ), ಎಂ.ಜಿ ಜಾಹ್ನವಿ(ಬಿಎಸ್‍ಡಬ್ಲ್ಯು), ಸೌಂದರ್ಯ ಎಂ.ಎನ್(ಬಿವಿಎ) ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಎಸ್. ಪ್ರತಿಮಾ(ಎಫ್‍ಎನ್‍ಡಿ), ಸರಿತಾ ಬಿ,(ಬಿಎಸ್‍ಡಬ್ಲ್ಯು), ಮನೋಹರ್ ಇಟಿಗೆ ಕೆ.(ಬಿವಿಎ) ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ. ರೋಲಿನ್ ಪ್ರೀತಾ ವಾಝ್(ಬಿಎಸ್‍ಸಿ-ಪಿಸಿಎಂ), ಸ್ತುತಿ ವೈ.(ಎಫ್‍ಎನ್‍ಡಿ), ವೈಶಾಲಿ ದಯಾನಂದ ಶೆಟ್ಟಿಗಾರ್(ಬಿಎಚ್‍ಎಸ್), ಸಾಯುಜ್ಯ ಎಸ್.(ಬಿಎ), ಕಿರಣ್ ಅಣ್ಣ ಜಾರ್ಜ್(ಬಿವಿಎ) ತೃತೀಯ ರ್ಯಾಂಕ್ ಗಳಿಸಿದ್ದಾರೆ.
5ನೇ ರ್ಯಾಂಕ್ ಅನ್ನು ವಿನಯ್.ಎಸ್.ಕೆ(ಬಿಸಿಎ). ಅಕ್ಷಯಾ ಎಂ.ಪಿ(ಬಿಎ), 6ನೇ ರ್ಯಾಂಕ್ ಸೂರ್ಯ ಎಸ್(ಬಿ.ಕಾಂ), ಸುಪ್ರಿಯಾ ದೇವರಾಜ್ ಎಂ.( ಬಿ.ಎ), 8ನೇ ರ್ಯಾಂಕ್- ಸುಕಾನ್ಯ ಪರಾಡ್ಕರ್(ಬಿ.ಕಾಂ), 10ನೇ ರ್ಯಾಂಕ್ ಅನ್ನು ಸಿಡ್ನಾ ರೀಮಾ ಸೆರಾವೊ( ಬಿಎಸ್‍ಸಿ-ಪಿಎಂಸಿ), ಮಮತಾ ಪಿ.ಡಿ(ಬಿ.ಕಾಂ) ಪಡೆದಿದ್ದಾರೆ. ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಭಿನಂದಿಸಿದ್ದಾರೆ.
Click this button or press Ctrl+G to toggle between Kannada and English