ವಿವೇಕಾನಂದರ ಸಂದೇಶ ಹೊತ್ತು ತಂದಿರುವ ‘ವಿವೇಕ ಎಕ್ಸ್‌ಪ್ರೆಸ್‌’ ಮಂಗಳೂರಿನಲ್ಲಿ

1:02 PM, Saturday, August 6th, 2011
Share
1 Star2 Stars3 Stars4 Stars5 Stars
(No Ratings Yet)
Loading...

Viveka Express/'ವಿವೇಕ ಎಕ್ಸ್‌ಪ್ರೆಸ್‌' ರೈಲು

ಮಂಗಳೂರು : ಭಾರತೀಯ ರೈಲ್ವೇ ವತಿಯಿಂದ ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಉದಾತ್ತವಾದ ಸಂದೇಶ ಹೊತ್ತು ತಂದಿರುವ ‘ವಿವೇಕ ಎಕ್ಸ್‌ಪ್ರೆಸ್‌’ ರೈಲು ಪಶ್ಚಿಮ ಬಂಗಾಳದ ಹೌರಾದಿಂದ ಹೊರಟು ಶುಕ್ರವಾರ ಮಂಗಳೂರು ಸೆಂಟ್ರಲ್‌ ನಿಲ್ದಾಣಕ್ಕೆ ತಲುಪಿತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪಾಲಕ್ಕಾಡು ಡಿವಿಜನಲ್‌ ಮೆನೇಜರ್‌ ಎಸ್‌. ಕೆ. ರೈನಾ ಸಾರ್ವಜನಿಕರ ವೀಕ್ಷಣೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು 8 ರಾಜ್ಯಗಳಲ್ಲಿ 79 ರೈಲು ನಿಲ್ದಾಣಗಳನ್ನು ಹಾದು ಬಂದಿರುವ ವಿಶೇಷ ರೈಲಿನಲ್ಲಿರುವ ಸ್ವಾಮಿ ವಿವೇಕಾನಂದ ಅವರ ಅಪರೂಪದ ಛಾಯಾಚಿತ್ರ, ಸಂದೇಶ, ಮಾಹಿತಿ ಫ‌ಲಕಗಳನ್ನು ಸುಮಾರು ಆರು ಲಕ್ಷ ಜನರು ವೀಕ್ಷಿಸಿದ್ದಾರೆ ಎಂದರು.

ಸ್ವಾಮಿ ವಿವೇಕಾನಂದ ಜೀವನ ಮೌಲ್ಯಗಳನ್ನು ಹೊತ್ತುತಂದಿರುವ ಈ ರೈಲು ಯುವಜನರಲ್ಲಿ, ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಏಕತೆಯ ಮನೋಭಾವ ತುಂಬಿಕೊಳ್ಳಲು ಸ್ಫೂರ್ತಿ ನೀಡಲಿ ಎಂದು ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿ. ವಿ. ಕುಲಪತಿ ಟಿ. ಸಿ. ಶಿವಶಂಕರ ಮೂರ್ತಿ ಅವರು ಹಾರೈಸಿದರು.

Viveka Express/ವಿವೇಕ ಎಕ್ಸ್‌ಪ್ರೆಸ್‌' ರೈಲು

ರಾಮಕೃಷ್ಣ ಮಠದ ಸ್ವಾಮಿ ಜಿತಕಾನಂದಜೀ ಅವರು ಅಧ್ಯಕ್ಷತೆ ವಹಿಸಿದ್ದರು. ಪಶ್ಚಿಮ ವಲಯ ಐಜಿಪಿ ಅಲೋಕ್‌ ಮೋಹನ್‌, ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಅವರು ಮುಖ್ಯ ಅತಿಥಿಗಳಾಗಿದ್ದರು. ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟೆ ಅವರು ಉಪಸ್ಥಿತರಿದ್ದರು. 

ಸ್ವಾಗತ ಸಮಿತಿ ಅಧ್ಯಕ್ಷ ಕೆ. ಸಿ. ನಾಯಕ್‌ ಸ್ವಾಗತಿಸಿದರು. ಉಪಾಧ್ಯಕ್ಷ ಡಾ| ಜೀವರಾಜ ಸೊರಕೆ ವಂದಿಸಿದರು. ವಿ. ವಿ. ವಿದ್ಯಾರ್ಥಿ ಚೇತನ್‌ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲಿ ‘ವಿವೇಕ ಎಕ್ಸ್‌ಪ್ರೆಸ್‌’ ರೈಲು ಆ. 7 ತನಕ ಈ ರೈಲು ನಗರದ ನಿಲ್ದಾಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English