ಮಚ್ಚೇಂದ್ರನಾಥ ಪಾಂಡೇಶ್ವರರಿಗೆ ‘ತುಳುನಾಡ ತುಳುಶ್ರೀ’ಪ್ರಶಸ್ತಿ ಪ್ರಧಾನ

1:00 PM, Saturday, August 6th, 2011
Share
1 Star2 Stars3 Stars4 Stars5 Stars
(No Ratings Yet)
Loading...

Machendranatha Pandeshwar/ ಮಚ್ಚೇಂದ್ರನಾಥ ಪಾಂಡೇಶ್ವರ

ಮಂಗಳೂರು : ನಾಟಕಕಾರ-ಸಿನಿಮಾ ನಟ ಮಚ್ಚೇಂದ್ರನಾಥ ಪಾಂಡೇಶ್ವರ ಅವರನ್ನು ಆಲದಪದವು ಅಕ್ಷರ ಪ್ರತಿಷ್ಠಾನ ವತಿಯಿಂದ ನೀಡಲಾಗುವ 8ನೇ ವರ್ಷದ ‘ತುಳುನಾಡ ತುಳುಶ್ರೀ’ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ ನಾಟಕ ಹಾಗೂ ತುಳು ಸಾಹಿತ್ಯದಲ್ಲಿ ಅನೇಕ ಹಾಡುಗಳನ್ನು ರಚಿಸಿ, 160ಕ್ಕೂ ಹೆಚ್ಚು ನಾಟಕಗಳನ್ನು ಬರೆದು ಸ್ವತಃ ಹಲವು ನಾಟಕಗಳಲ್ಲಿ ಪ್ರಬುದ್ದ ನಟರಾಗಿ-ನಿರ್ದೇಶಕರಾಗಿ ಸೇವೆ ಸಲ್ಲಿಸಿದಕ್ಕೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ಆಗಸ್ಟ್ 7ರಂದು ಸಂಜೆ 3ಗಂಟೆಗೆ ರಾಯಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಪ್ರಶಸ್ತಿ ಪ್ರದಾನ ಮಾಡುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಸರಪಾಡಿ ಅಶೋಕ ಶೆಟ್ಟಿ ಅದ್ಯಕ್ಷತೆ ವಹಿಸುವರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ದಯಾವತಿ ಎಸ್,ಯೋಜನೆಯ ಸಿದ್ದಕಟ್ಟೆ ವಲಯಾಧ್ಯಕ್ಷ ಜಗದೀಶ್ ಕೊಲ, ತಾಲೂಕು ಪಂಚಾಯತು ಸದಸ್ಯ ಎಪ್ರೇಮ್ ಸಿಕ್ವೇರಾ ಅತಿಥಿಗಳಾಗಿ ಭಾಗವಹಿಸುವರು.

ಮಚ್ಚೇಂದ್ರನಾಥ್ ಪಾಂಡೇಶ್ವರ ಬಗ್ಗೆ ಒಂದು ಮಾತು : 77ರ ಹರೆಯದ ಪಾಂಡೇಶ್ವರರವರು ತನ್ನ ೧೪ನೇ ಹರೆಯದಲ್ಲೇ ನಾಟಕ ರಚನೆಯಲ್ಲಿ ತೊಡಗಿಸಿಕೊಂಡು 160ಕ್ಕೂ ಹೆಚ್ಚು ನಾಟಕಗಳನ್ನು ಬರೆದು.ಸ್ವತಃ ಹಲವು ನಾಟಕಗಳಲ್ಲಿ ಪ್ರಬುದ್ದ ನಟರಾಗಿ-ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತನ್ನದೇ ಆದ ನಾಟಕ ಸಂಘವನ್ನು ಕಟ್ಟಿಕೊಂಡು ಆ ಮೂಲಕ ನೂರಾರು ಕಲಾವಿದರನ್ನು ಸೃಷ್ಟಿಸಿ ಜಿಲ್ಲೆ ಮತ್ತು ರಾಜ್ಯದ ವಿವಿದೆಡೆ ಯಶಸ್ವಿ ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ.

ಕೌನ್ಸಿಲರ್ ಕೊಗ್ಗಣ್ಣೆ, ಅಜ್ಜಿ ತಾಂಕಿನ ಪುಳ್ಳಿ, ನೆತ್ತೆರ ನೀರಾ ಮೊದಲಾದ ನಾಟಕಗಳು ಕೃತಿ ರೂಪದಲ್ಲಿ ಪ್ರಕಟಣೆಗೊಂಡಿದ್ದು ಪೊರ್‍ತು ಕಂತ್ ಡ್ , ತೆಲ್ಪರೆ ಕಲ್ಪಿ, ಸತ್ಯ ಸಯ್ಯಂದ್, ಅಜ್ಜಿನ ಗೌಜಿ, ಬೊಲ್ಪುಗು ಬಲೆ ಮೊದಲಾದ ನಾಟಕ ಸಹಸ್ರಾರು ಪ್ರಯೋಗಗಳೊಂದಿಗೆ ಅನೇಕ ಪ್ರಶಸ್ತಿಗಳೂ ಲಭಿಸಿವೆ.

ಮಾತೃಭೂಮಿಗಾಗಿ ಮಡಿಯುವೆವು,ನಾ ಸಾಯಲಾರೆ,ದೇವದಾಸ್ ಮೊದಲಾದ ಕನ್ನಡ ನಾಟಕಗಳ ಸಹಿತ 15ಕ್ಕೂ ಹೆಚ್ಚು ಧ್ವನಿ ಸುರುಳಿಗಳು,ನೂರಾರು ಪ್ರಹಸನಗಳನ್ನು ರಚಿಸಿದ್ದಾರೆ. ದಾರೆದ ಸೀರೆ,ಪೆಟ್ಟಾಯಿ ಪಿಲಿ, ಬದ್ಕೆರೆ ಬುಡ್ಲೆ, ಭಾಗ್ಯವಂತೆದಿ, ತುಡರ್ ಮೊದಲಾದ ತುಳು ಸಿನಿಮಾಗಳ ಚಿತ್ರಕತೆ,ಸಂಭಾಷಣೆ,ಪದ್ಯ ರಚನೆಗಾರರಾಗಿ ತೊಡಗಿಸಿಕೊಂಡ ಪಾಂಡೇಶ್ವರ ಅವರು ಕೆಲವು ಸಿನಿಮಾಗಳಲ್ಲಿ ಉತ್ತಮ ನಟರಾಗಿಯೂ ಮಿಂಚಿದವರು.

ಜಿಲ್ಲಾ ರಾಜ್ಯೋತ್ಸವ, ಕರ್ನಾಟಕ ನಾಟಕ ಅಕಾಡೆಮಿ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ,ಸಂಸ್ಕಾರ ಭಾರತಿ, ನಮ್ಮ ಕುಡ್ಲ, ಬ್ರಹ್ಮಶ್ರೀ ಮೊದಲಾದ ಪ್ರಶಸ್ತಿಗಳನ್ನು ಪಡೆದಿರುವ ಮಚ್ಚೇಂದ್ರನಾಥ್ ಅವರು ತುಳುಕೂಟ,ತುಳುನಾಟಕ ಕಲಾವಿದರ ಒಕ್ಕೂಟ ಮೊದಲಾದ ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಒಬ್ಬ ಪ್ರಭುದ್ಧ ಕಲಾವಿದರಾಗಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English