ಗ್ರಾಮೀಣ ಜನರ ಬಾಳಿಗೆ ಬೆಳಕಾದ ಗಿರೀಶ್ ಭಾರದ್ವಾಜ್ ಗೆ ಪದ್ಮಶ್ರೀ ಪ್ರಶಸ್ತಿ

11:24 AM, Thursday, January 26th, 2017
Share
1 Star2 Stars3 Stars4 Stars5 Stars
(No Ratings Yet)
Loading...

Bharadwajಮಂಗಳೂರು: ಗ್ರಾಮೀಣ ಜನರ ಬಾಳಿಗೆ ಬೆಳಕಾದವರು ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್. ಮಳೆಗಾಲ ಹತ್ತಿರ ಬರುತ್ತಿದ್ದಂತೆ ನದಿಗಳನ್ನು ಹಾದುಹೋಗಲು ಹರಸಾಹಸ ಪಡುವವರಿಗೆ ಸೇತುವೆಗಳ ಮೂಲಕ ಅವರ ಮಾರ್ಗಗಳನ್ನು ಸುಗಮಗೊಳಿಸಿದವರು. ಇವರ ಈ ವಿಶಿಷ್ಟ ಸೇವೆಗೆ ಪದ್ಮಶ್ರೀ ಅರಸಿಬಂದಿದೆ.

ಕಳೆದ ಮೂರು ದಶಕಗಳಿಂದ ದೇಶದ ವಿವಿಧೆಡೆ ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ವಿಶ್ವವಿಖ್ಯಾತಿ ಪಡೆದ ಗಿರೀಶ್ ಭಾರದ್ವಾಜ್ ಮೂಲತ: ಸುಳ್ಯದ ಅರಂಬೂರಿನವರು. ಬಿ.ಇ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಗಿರೀಶ್ ಅವರು ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ 55 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸುವ ಮೂಲಕ ವಿನೂತನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವರು. ಬಳಿಕ ತಮ್ಮ ತವರೂರಿನಲ್ಲೇ ಪಯಸ್ವಿನಿ ನದಿಗೆ ಅಡ್ಡಲಾಗಿ 87 ಮೀಟರಿನ ತೂಗು ಸೇತುವೆಯನ್ನು ನಿರ್ಮಿಸಿದರು. ಅಷ್ಟರಲ್ಲಾಗಲೇ ಅವರ ಹೆಸರು ಜನಜನಿತವಾಗಿತ್ತು.

ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡ ಭಾರದ್ವಾಜರು 28 ವರ್ಷಗಳ ಜೈತ್ರ ಯಾತ್ರೆಯಲ್ಲಿ 127 ತೂಗುಸೇತುವೆಗಳನ್ನು ನಿರ್ಮಿಸಿದ್ದಾರೆ. ಎರಡು ಸೇತುವೆಗಳು ನಿರ್ಮಾಣ ಹಂತದಲ್ಲಿವೆ. ಕರ್ನಾಟಕದಲ್ಲಿ 91, ಕೇರಳದಲ್ಲಿ 30, ಆಂಧ್ರಪ್ರದೇಶದಲ್ಲಿ ಮೂರು ಹಾಗು ಒಡಿಶಾದಲ್ಲಿ ಮೂರು ಸೇತುವೆಗಳನ್ನು ನಿರ್ಮಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English