ಚರ್ಚ್‌ಗಳಲ್ಲಿ ರಾಷ್ಟ್ರೀಯ ಚಿಂತನೆಗಳ ಬೋಧನೆಗೂ ಅವಕಾಶ ಕಲ್ಪಿಸಬೇಕು: ಫ್ರಾಂಕ್ಲಿನ್ ಮೊಂತೆರೋ

11:40 AM, Thursday, January 26th, 2017
Share
1 Star2 Stars3 Stars4 Stars5 Stars
(No Ratings Yet)
Loading...

Frankin Montheroಮಂಗಳೂರು: ಚರ್ಚ್‌ಗಳಲ್ಲಿ ಧಾರ್ಮಿಕ ಬೋಧನೆಯೊಂದಿಗೆ ರಾಷ್ಟ್ರೀಯ ಚಿಂತನೆಗಳ ಬೋಧನೆಗೂ ಒತ್ತು ನೀಡುವಂತೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಧಾರ್ಮಿಕ ನಾಯಕರನ್ನು ಆಗ್ರಹಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆಯ ಸ್ಥಾಪಕ ಸಂಚಾಲಕ ಫ್ರಾಂಕ್ಲಿನ್ ಮೊಂತೆರೋ, ಭಾರತೀಯ ಕ್ರೈಸ್ತರು ರಾಷ್ಟ್ರದ ಬಗ್ಗೆ ಸದಾ ಚಿಂತನೆ ಹೊಂದಿದ್ದು, ದೇಶ ಹಿತಕ್ಕೆ ಸದಾ ಸ್ಪಂದಿಸುವ ಮನಸ್ಸುಳ್ಳವರಾಗಿದ್ದಾರೆ.

ಆದರೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಜಾಗತಿಕ ಅಥವಾ ಆಂತರಿಕವಾಗಿ ಘಟನೆಗಳು ನಡೆದಾಗ ಕ್ರೈಸ್ತ ಸಮಾಜ ಸಂಘಟಿತವಾಗಿ ಒಕ್ಕೊರಲಿನಿಂದ ಖಂಡಿಸುವ ಮತ್ತು ವಿರೋಧಿಸುವ ಮನೋಭಾವನೆಯನ್ನು ಮತ್ತಷ್ಟು ಬೆಳೆಸಿಕೊಳ್ಳುವ ಮೂಲಕ ರಾಷ್ಟ್ರ ಚಿಂತನೆ ಬಗ್ಗೆ ಸದಾ ಕಾಳಜಿ ಉಳ್ಳವರು ಎಂಬುದನ್ನು ತೋರಿಸಬೇಕಾಗಿದೆ.

ಹೀಗಾಗಿ ಚರ್ಚ್‌ಗಳಲ್ಲಿ ಪ್ರತೀ ಭಾನುವಾರ ನಡೆಯುವ ಪ್ರವಚನಗಳಲ್ಲಿ ಧಾರ್ಮಿಕತೆಯೊಂದಿಗೆ ಒಂದಿಷ್ಟು ರಾಷ್ಟ್ರೀಯ ಚಿಂತನೆಗಳ ಬೋಧನೆಗೂ ಅವಕಾಶ ಕಲ್ಪಿಸಬೇಕು. ಹಿಂದು ಧರ್ಮದವರು ಧಾರ್ಮಿಕ ಆಚರಣೆಗಳ ಸಂದರ್ಭ ಭಾರತೀಯ ವಾದ್ಯೋಪಕರಣಗಳನ್ನು ಬಳಸುವಂತೆ ಚರ್ಚ್‌ಳಲ್ಲಿಯೂ ಭಾರತೀಯ ಸಂಗೀತೋಪಕರಣಗಳ ಬಳಕೆಗೂ ಅವಕಾಶ ನೀಡಬೇಕು.

ಮನಸ್ಸಿಗೆ ಆಹ್ಲಾದಕರ ವಾತಾವರಣ ಕಲ್ಪಿಸುವ ಇವು ವೈಜ್ಞಾನಿಕವಾಗಿಯೂ ಆರೋಗ್ಯದಿಂದ ಕೂಡಿದೆ. ಈ ಬಗ್ಗೆ ಭಾರತೀಯ ಕ್ರೈಸ್ತ ಧರ್ಮ ಸಭೆ ಗಮನ ಹರಿಸುವಂತೆ ಒತ್ತಾಯಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English