ಕಂಬಳ ಹೋರಾಟಕ್ಕೆ ಬೀದಿಗಿಳಿಯಲಿರುವ ತುಳು ಕಲಾವಿದರು

1:02 AM, Friday, January 27th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Tulu Actors ಮಂಗಳೂರು: ತುಳು ಚಿತ್ರರಂಗದ ಕಲಾವಿದರು ಕಂಬಳ ಹೋರಾಟಕ್ಕೆ ಮುಂದಾಗಿದ್ದು , ಜ. 27 ರಂದು ಮಂಗಳೂರು ನಗರದಲ್ಲಿ ನಡೆಯುವ ಮಾನವ ಸರಪಳಿ ಹಾಗೂ 28 ರಂದು ಮೂಡುಬಿದಿರೆಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ತುಳು ಚಿತ್ರರಂಗದ ಹಿರಿಯ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಮತ್ತು ಹಿರಿಯ ನಟ, ನಿರ್ದೇಶಕ ದೇವದಾಸ ಕಾಪಿಕಾಡ್ ಹೇಳಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಕೊಡಿಯಾಲ್‌ಬೈಲ್, ತುಳು ಚಿತ್ರರಂಗದ ಕಲಾವಿದರು ಮಾತ್ರವಲ್ಲ ನಾಟಕ, ಯಕ್ಷಗಾನ, ಸಾಂಸ್ಕೃತಿಕ ರಂಗಭೂಮಿಯ ಕಲಾವಿದರು ಕಂಬಳ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದರು.

ಕನ್ನಡದ ಸ್ಟಾರ್ ನಟರಾದ ಶಿವರಾಜ್ ಕುಮಾರ್, ಜಗ್ಗೇಶ್, ಯಶ್, ರಕ್ಷಿತಾ ಈಗಾಗಲೇ ಕಂಬಳ ಹೋರಾಟವನ್ನು ಬೆಂಬಲಿಸಿದ್ದಾರೆ. ಸಾಂಸ್ಕೃತಿಕ ರಂಗದಲ್ಲಿರುವ ಎಲ್ಲಾ ಕಲಾವಿದರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ. ಇಲ್ಲಿ ಸುಮಾರು 25 ನಾಟಕ ತಂಡಗಳಿದ್ದು, ಇದರಲ್ಲಿ 15 ತಂಡಗಳನ್ನು ಈಗಾಗಲೇ ಸಂಪರ್ಕಿಸಲಾಗಿದೆ. ಉಭಯ ದಿನಗಳು ನಡೆಯುವ ಪ್ರತಿಭಟನೆಗಳಲ್ಲಿ ತಲಾ ಸುಮಾರು ಒಂದೂವರೆ ಸಾವಿರ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಕಲಾವಿದ ಸುಂದರ ರೈ ಮಂದಾರ ಹೇಳಿದರು.

`ಬರ್ಸ’ ಚಲನಚಿತ್ರದ `ಪೊರ್ಲುಡು ಪೊರ್ಲು’ ಈ ತುಳುನಾಡು…’ ಜನಪ್ರಿಯ ಹಾಡಿನ ಧಾಟಿಯ ಕಂಬಳದ ಹಾಡು ಧ್ವನಿ ಮುದ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುವುದು. ಕಂಬಳದ ಹಿರಿಮೆ- ಗರಿಮೆಯನ್ನು ಸಾರುವ ಸಾಹಿತ್ಯವನ್ನು ಈ ಜಾಗೃತಿ ಹಾಡು ಹೊಂದಿರುತ್ತದೆ.

ಎತ್ತಿನಹೊಳೆ ಯೋಜನೆ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಈಗಾಗಲೇ ವೈಯುಕ್ತಿಕವಾಗಿ ಕೆಲವು ಕಲಾವಿದರು ಪಾಲ್ಗೊಂಡಿದ್ದಾರೆ. ಸಂಘಟಿತರಾಗಿ ಪಾಲ್ಗೊಂಡಿಲ್ಲ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English