ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜು ಏರೋನಾಟಿಕ್ಸ್ ಕ್ಷೇತ್ರದಲ್ಲಿ ಏರೋ ಮಾದರಿ ಸ್ಪರ್ಧೆ

11:08 AM, Saturday, January 28th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Air-Showಮಂಗಳೂರು: ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜು ಏರೋನಾಟಿಕ್ಸ್ ಕ್ಷೇತ್ರದಲ್ಲಿ ವಿಶಾಲ ದೃಷ್ಟಿಕೋನದಿಂದ ಎರಡು ದಿನಗಳ ಏರೋ ಮಾದರಿ ರಾಷ್ಟ ಮಟ್ಟದ ಸ್ಪರ್ಧೆಯನ್ನು ಆಯೋಜಿಸಿದ್ದು, ಏರೋಫಿಲಿಯಾ-2017 ವಾರ್ಷಿಕ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿದ ವಿಮಾನ ಮಾದರಿಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿದೆ.

ಏರೊಫಿಲಿಯಾ 2017ರ ಈ ಏರ್ ಶೋ ವನ್ನು ಅಬ್ದುಲ್ಲಾ ಜಸೀಮ್ ನಿರ್ವಹಿಸಿದ್ದಾರೆ. ಏರ್ ಶೋ ಗಣಿತ, ಇತಿಹಾಸ, ಕಲೆ, ವಿನ್ಯಾಸ ಹಾಗೂ ವಿಜ್ಞಾನದಲ್ಲಿ ವೈವಿಧ್ಯಮಯ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಿದೆ.

ಏರೋಫೀಲಿಯಾ-2017 ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು 1,45,000 ರೂಪಾಯಿಯವರೆಗೂ ಬಹುಮಾನ ಪಡೆಯಲಿದ್ದು, ಈ ಸ್ಪರ್ಧೆ ರಾಷ್ಟ್ರ ಮಟ್ಟದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಭಾರತದ ಪ್ರಥಮ ಡ್ರೋಣ್ ಸ್ಪರ್ಧೆ ನಡೆಯುತ್ತಿದ್ದು, 50 ಸಾವಿರದವರೆಗೂ ನಗದು ಬಹುಮಾನ ಸಿಗಲಿದೆ.

ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ರೇಡಿಯೊ ಕಂಟ್ರೋಲ್ಡ್ ಏರ್ ಕ್ರಾಫ್ಟ್ ಮಾದರಿಯ ವಿನ್ಯಾಸವಿದೆ. ಒಂದು ನಿಯಮಿತ ವಿದ್ಯುತ್ ವ್ಯವಸ್ಥೆಯಲ್ಲಿ ಏರೋಕ್ರಾಫ್ಟ್ ಹೊತ್ತೊಯ್ಯುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತಿದೆ. ಸ್ಪರ್ಧೆಯ ವಿಶೇಷವೆಂದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಫರ್ಧೆಗಳು ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದು, ಐಐಟಿ ಹಾಗೂ ಎನ್ಐಟಿ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English