ಮಂಗಳೂರು : ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೇಲಿನ ನಿಷೇಧ ವಿರೋಧಿಸಿ ಕಡಲ ನಗರಿಯಲ್ಲಿ ಪ್ರತಿಭಟನೆಗಳು ಪ್ರಬಲಗೊಂಡಿವೆ. ಇಂದು ಸಹ ಸಚಿವ ಅಭಯಚಂದ್ರ ಜೈನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ( ಹಕ್ಕೊತ್ತಾಯ ಜಾಥಾ ) ನಡೆಯಿತು.
ನೂರಾರು ಕೋಣಗಳ ಸಮೇತ ಬೀದಿಗಳಿದ ಸಾವಿರಾರು ಸಂಖ್ಯೆಯ ಕಂಬಳ ಪ್ರಿಯರು ಮೂಡಬಿದರೆಯ ಸ್ವರಾಜ್ ಮೈದಾನದಿಂದ ಪ್ರತಿಭಟನೆ ಜಾಥಾ ಪ್ರಾರಂಭಿಸಿದರು. ಈ ಜಾಥಾ ಸ್ವರಾಜ್ ಮೈದಾನದಿಂದ ಕಡಲಕೆರೆವರೆಗೆ ಸಾಗಲಿದೆ.
ಪ್ರತಿಭಟನಾ ಮೆರವಣೆಗೆಯಲ್ಲಿ ಕಂಬಳದ ಮೇಲಿನ ನಿಷೇಧಕ್ಕೆ ವಿರೋಧ ವ್ಯಕ್ತ ಪಡಿಸಿದ ಪ್ರತಿಭಟನಾಕಾರರು, ಕಂಬಳ ಆಚರಣೆಗೆ ಸುಗ್ರೀವಾಜ್ಞೆ ಹೊರಡಿಸುವಂತೆ ಆಗ್ರಹಿಸಿದರು.
Click this button or press Ctrl+G to toggle between Kannada and English