ಮಂಗಳೂರು: ಕಬ್ಬಿಣದ ಏಣಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಂಗಳೂರಿನ ನಂತೂರು ಬಳಿಯ ಉಜ್ಜೋಡಿಯಲ್ಲಿ ನಡೆದಿದೆ.
ವಲೇರಿಯನ್ ಲೋಬೋ(55), ಎಸ್ಮಿ ಲೋಬೋ(51), ಸಂದೀಪ್ (28) ಮೃತಪಟ್ಟವರು. ಕಬ್ಬಿಣದ ಏಣಿಯಿಟ್ಟು ತೆಂಗಿನ ಮರಕ್ಕೇರಿದ್ದಾಗ ಈ ದುರಂತ ಸಂಭವಿಸಿದೆ. ತೆಂಗಿನಮರದಲ್ಲಿದ್ದ ಕಾಳುಮೆಣಸು ಕೀಳಲು ವಲೇರಿಯನ್ ಲೋಬೋ ಮರ ಹತ್ತಿದ್ದರು.
ಈ ವೇಳೆ ಸ್ಟೀಲ್ ಏಣಿ ವಿದ್ಯುತ್ ತಂತಿಗೆ ಬಿದ್ದು ಈ ದುರಂತ ಸಂಭವಿಸಿದೆ. ಲೋಬೋ ರಕ್ಷಣೆಗೆ ಧಾವಿಸಿದ ಇಬ್ಬರು ಕೂಡ ದುರಂತದಲ್ಲಿ ಸಾವಿಗೀಡಾಗಿದ್ದಾರೆ.
Click this button or press Ctrl+G to toggle between Kannada and English