ರಾಜ್ಯ ಜೂನಿಯರ್ ಬಾಲ್‍ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಗೆ ಅವಳಿ ಪ್ರಶಸ್ತಿ

10:55 AM, Tuesday, January 31st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Alwasಮೂಡುಬಿದಿರೆ: ಭದ್ರಾವತಿಯಲ್ಲಿ ಭಾನುವಾರ ಮುಕ್ತಾಯಗೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಾಲಕ ಹಾಗೂ ಬಾಲಕಿಯರ ತಂಡ 2016-17ನೇ ಸಾಲಿನ ರಾಜ್ಯ ಜೂನಿಯರ್ ಬಾಲ್‍ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಕರ್ನಾಟಕ ಬಾಲ್‍ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಸ್ಪುಟ್ನಿಕ್ ಬಾಲ್‍ ಬ್ಯಾಡ್ಮಿಂಟನ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಭದ್ರಾವತಿಯಲ್ಲಿ ಭಾನುವಾರ ಮುಕ್ತಾಯಗೊಂಡಿತು.

ಪಂದ್ಯದಲ್ಲಿ ರಾಜ್ಯ ಜೂನಿಯರ್ ಚಾಂಪಿಯನ್‍ಶಿಪ್‍ನ ಫೈನಲ್‌ನಲ್ಲಿ ಆಳ್ವಾಸ್ ಬಾಲಕರ ತಂಡ ಭಗತ್ ಬಿ.ಬಿ.ಸಿ ನೆಲಮಂಗಲ ತಂಡವನ್ನು 35-20 ಹಾಗೂ 35-22 ಅಂಕಗಳಿಂದ ಸೋಲಿಸಿದರು.

ಆಳ್ವಾಸ್ ಬಾಲಕಿಯರ ತಂಡ ಬೆಂಗಳೂರಿನ ಬಿ.ಎಂ.ಎಸ್ ತಂಡವನ್ನು 35-12 ಹಾಗೂ 35-27 ಅಂಕಗಳಿಂದ ಸೋಲಿಸಿ 10ನೇ ಬಾರಿಗೆ ರಾಜ್ಯ ಜೂನಿಯರ್ ಬಾಲ್‍ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದ ಹೆಗ್ಗಳಿಕೆಗೆ ಪಾತ್ರರಾದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English