ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಸ್ಟೀಲ್ ಡೆವಲಪ್ಮೆಂಟ್, ಕೋಲ್ಕತ್ತ ಇವುಗಳ ಜಂಟಿ ಸಹಭಾಗಿತ್ವದಲ್ಲಿ ಜನವರಿ ಇಂದಿನಿಂದ ಐದು ದಿನಗಳ ಕಾರ್ಯಾಗಾರ ಪ್ರಾರಂಭಿಸಲಾಯಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕೋಲ್ಕತ್ತದ ಇನ್ಸ್‌ಟಿಟ್ಯೂಟ್ ಆಫ್ ಸ್ಟೀಲ್ ಡೆವಲಪ್ಮೆಂಟ್‍ನ ಅಧಿಕಾರಿ ಡಾ. ಜಯಂತ್ ಸಾಹ, ಸಮಾಜಕ್ಕೆ ಸಿವಿಲ್ ಇಂಜಿನಿಯರುಗಳ ಪಾತ್ರ ಅಪಾರ.
ಮೇಕ್ ಇನ್ ಇಂಡಿಯಾದ ಜೊತೆಗೆ ಸ್ಕಿಲ್ ಇಂಡಿಯಾದ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿಗೆ ಬೇಕಾದ ತರಬೇತಿಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಾಗಾರದಲ್ಲಿ ಅಮಿತ್ ಚೌಧರಿ, ಚಂದ್ರಶೇಖರ್, ಆಂಜನೇಯಮೂರ್ತಿ, ಡಾ. ಪ್ರದ್ಯುಮ್ನ, ಉಮೇಶ್ ರಾವ್, ಮಾಧವಕಾಮತ್, ಮಿತ್ರ ಬಿ.ದತ್ತ ಮತ್ತು ಡಾ.ಸಾವೊಯ್ಕರ್ ಸೇರಿದಂತೆ ವಿಷಯ ಪರಿಣಿತ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.
Click this button or press Ctrl+G to toggle between Kannada and English