2020 ಹಾಗೂ 2024 ಓಲಂಪಿಕ್ಸ್ ಆಯ್ಕೆ ಪ್ರಕ್ರಿಯೆ: ದಕ್ಷಿಣ ಭಾರತದಿಂದ ಒಟ್ಟು 19 ಕ್ರೀಡಾಪಟುಗಳ ಆಯ್ಕೆ

11:45 AM, Wednesday, February 1st, 2017
Share
1 Star2 Stars3 Stars4 Stars5 Stars
(No Ratings Yet)
Loading...

Mudabidreಮೂಡುಬಿದಿರೆ: 2020 ಹಾಗೂ 2024 ಓಲಂಪಿಕ್ಸ್ ಆಯ್ಕೆ ಪ್ರಕ್ರಿಯೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಸಮಾಪನಗೊಂಡಿದ್ದು, ಕರ್ನಾಟಕದ ಆರು ಮಂದಿ ಕ್ರೀಡಾಪಟುಗಳ ಸಹಿತ ದಕ್ಷಿಣ ಭಾರತದಿಂದ ಒಟ್ಟು 19 ಕ್ರೀಡಾಪಟುಗಳು ರಾಷ್ಟ್ರಮಟ್ಟದ ಅರ್ಹತಾ ಸುತ್ತಿಗೆ ಆಯ್ಕೆಯಾಗಿದ್ದಾರೆ.

17 ವಯೋಮಿತಿಯ ಬಾಲಕರ ವಿಭಾಗದ 400ಮೀಟರ್‍ನಲ್ಲಿ ರಿನ್ಸ್ ಜೋಸೆಫ್(ಕರ್ನಾಟಕ), ಅನ್ಸುನ್( ಕೇರಳ), ಮಹಾಂತೇಶ್(ಕರ್ನಾಟಕ), ರಘುಲ್ ಕುಮಾರ್( ತಮಿಳುನಾಡು), ಸಯುಜ್(ಕೇರಳ), ಅಭಿಷೇಕ್ ಮ್ಯಾಥ್ಯೂ (ಕೇರಳ) ರಿತಿನ್ ಆಲಿ(ಕೇರಳ), ನವನೀತ್( ತಮಿಳುನಾಡ್), 200 ಮೀ ಬಾಲಕರ ವಿಭಾಗದಲ್ಲಿ ಆರ್.ಸಿ ಗಣೇಶ್(ತಮಿಳುನಾಡು), ಫಾದೀಹ್(ಕೇರಳ), 100 ಮೀ.ನಲ್ಲಿ ಅಭಿನವ್.ಸಿ (ಕೇರಳ), ವಲಭ್ ಪಟೇಲ್(ಕರ್ನಾಟಕ) ಆಯ್ಕೆಯಾಗಿದ್ದಾರೆ.

14ರ ವಯೋಮಿತಿಯ ಬಾಲಕಿಯರ 400ಮೀ.ನಲ್ಲಿ ದೀಪಾಶ್ರೀ(ಕರ್ನಾಟಕ), ವಿಕಾಶಿನಿ( ತಮಿಳುನಾಡ್ ), 17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ 100 ಮೀ.ನಲ್ಲಿ ಜೋತ್ಸ್ನಾ ಸಿಮೋನ್(ಕರ್ನಾಟಕ), ಅಪರ್ಣಾ ರೋಯ್( ಕೇರಳ), 400ಮೀ ವಿಭಾಗದಲ್ಲಿ ರೋಶ್ನಿ( ಕೇರಳ), ಭೂಮಿಕಾ(ಕರ್ನಾಟಕ), ಸೋಫಿಯಾ ಸನ್ನಿ(ಕೇರಳ) ಆಯ್ಕೆಯಾದ ಕ್ರೀಡಾಪಟುಗಳು. ಕೇರಳದ 9 ಮಂದಿ, ತಮಿಳುನಾಡು, 4 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ, ಗೋವಾ, ಕೇರಳ, ತಮಿಳುನಾಡಿನ ಒಟ್ಟು 800 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಕರ್ನಾಟಕದಿಂದ ಆಯ್ಕೆಯಾದ 6 ಕ್ರೀಡಾಪಟುಗಳಲ್ಲಿ 5 ಮಂದಿ ಆಳ್ವಾಸ್ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಭೂಮಿಕಾ, ಜೋತ್ಸ್ನಾ, ದೀಪಾಶ್ರೀ, ರಿನ್ಸ್ ಜೋಸೇಫ್, ಮಹಾಂತೇಶ್ ರಾಷ್ಟ್ರಮಟ್ಟದ ಅರ್ಹತಾ ಸುತ್ತಿಗೆ ಆಯ್ಕೆಯಾದ ಆಳ್ವಾಸ್‍ನ ಕ್ರೀಡಾಪಟುಗಳು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English