ಮಂಗಳೂರು: ಕೇಂದ್ರ ಬಜೆಟ್ ದೇಶದ ಪ್ರಗತಿಗೆ ಯಾವುದೇ ದೂರದಶಿ೯ತ್ವ ಇಲ್ಲದ ನಿರಾಶಾದಾಯಕ ಬಜೆಟ್ ಎಂದು ಆಹಾರ ಸಚಿವ ಯು.ಟಿ. ಖಾದರ್ ಟೀಕಿಸಿದ್ದಾರೆ.
ನೋಟು ನಿಷೇಧದ ನಂತರ ದೇಶದ ಬ್ಯಾಂಕುಗಳಲ್ಲಿ ಎಷ್ಟು ಹಣ ಠೇವಣಿಯಾಗಿದೆ ಎಂಬ ಮಾಹಿತಿಯನ್ನು ಬಜೆಟ್‌ನಲ್ಲಿ ಬಹಿರಂಗ ಪಡಿಸಿಲ್ಲ. ಬಜೆಟ್ ಎಂಬುದು ದೇಶದ ಆರ್ಥಿಕ ಮೂಲ ಮತ್ತು ಪರಿಸ್ಥಿತಿ ತಿಳಿಸುವ ಮಾಹಿತಿ.
ಆದರೆ ಹಣದ ಮೂಲಗಳನ್ನು ಸ್ಪಷ್ಟಪಡಿಸಿಲ್ಲ. ಜನಸಾಮಾನ್ಯರ ಉಳಿತಾಯವನ್ನು ಕಪ್ಪುಹಣ ಎಂದು ಕೇಂದ್ರ ಹೆಮ್ಮೆ ಪಡುತ್ತಿದೆ ಎಂದು ಟೀಕಿಸಿದರು.
ನೋಟು ನಿಷೇಧದ ಹಿಂದಿನ ಮೂರು ತಿಂಗಳಲ್ಲಿ ದೇಶದಲ್ಲಿ 2.5. ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗಿದ್ದರೆ, ನೋಟು ನಿಷೇಧ ನಂತರದ 3 ತಿಂಗಳಲ್ಲಿ ಇದು 1.5 ಲಕ್ಷ ಕೋಟಿಗೆ ತಗ್ಗಿದೆ. ಇದರಿಂದ ದೇಶದಲ್ಲಿ ಉದ್ಯೋಗಾವಕಾಶಗಳು ತಗ್ಗುತ್ತಿವೆ ಎಂದು ಸಚಿವ ಖಾದರ್ ಹೇಳಿದ್ದಾರೆ.
Click this button or press Ctrl+G to toggle between Kannada and English