ಮಂಗಳೂರು ತಾ.ಪಂ. ನೂತನ ಕಟ್ಟಡ ನಿರ್ಮಾಣಕ್ಕೆ ರೂ. 350 ಲಕ್ಷ ಮಂಜೂರಾತಿ

8:39 PM, Wednesday, February 1st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

monuಮಂಗಳೂರು  : ಮಂಗಳೂರು ತಾಲೂಕು ಪಂಚಾಯತ್‍ಗೆ ನೂತನ ವಿಸ್ತಾರವಾದ ಕಟ್ಟಡ ನಿರ್ಮಿಸಲು ರಾಜ್ಯ ಸರಕಾರ ಮಂಜೂರಾತಿ ನೀಡಿದೆ ಎಂದು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು ತಿಳಿಸಿದ್ದಾರೆ.

ಮಂಗಳೂರು ತಾ.ಪಂ. ಆಡಳಿತ ಕಛೇರಿ ಕಟ್ಟಡವು ಸುಮಾರು 60 ವರ್ಷಗಳಿಗಿಂತಲೂ ಹಳೆಯದಾಗಿದ್ದು 1987 ಇಸವಿಯಲ್ಲಿ ಅವಿಭಜಿತ ದ.ಕ ಹಾಗೂ ಉಡುಪಿ ಜಿಲ್ಲೆಗಳ ಜಿಲ್ಲಾ ಪರಿಷತ್ತು ಕಛೇರಿಯು ಕಾರ್ಯನಿರ್ವಹಿಸುತ್ತಿತ್ತು.

2016-17ನೇ ಸಾಲಿನಲ್ಲಿ ಈ ಕಛೇರಿಯನ್ನು ಒಡೆದು ಹೊಸ ಕಟ್ಟಡವನ್ನು ರಚಿಸಲು ರೂ. 350 ಲಕ್ಷಗಳ ವೆಚ್ಚದಲ್ಲಿ ಗ್ರಾಮೀಣ ಪಂಚಾಯತ್ ರಾಜ್ ಇಲಾಖೆ ಮೂಲಕ ಕರ್ನಾಟಕ ಸರ್ಕಾರದಿಂದ ಆಡಳಿತ ಮಂಜೂರಾತಿ ದೊರಕಿರುತ್ತದೆ. ಈ ಹೊಸ ಕಛೇರಿಯಲ್ಲಿ ತಳ ಅಂತಸ್ತಿನಲ್ಲಿ ವಾಹನ ನಿಲುಗಡೆ, ನೆಲ ಅಂತಸ್ತಿನಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಿಬ್ಬಂದಿ, ಒಂದನೇ ಮಹಡಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಅವರ ಸಿಬ್ಬಂದಿಗಳು ಹಾಗೂ ಎರಡನೇ ಮಹಡಿಯಲ್ಲಿ ಸುಸಜ್ಜಿತವಾದ ತಾಲೂಕು ಪಂಚಾಯತ್ ಸಭಾಂಗಣ ರಚನೆಯಾಗಲಿದೆ.

ಈ ತಾಲೂಕು ಪಂಚಾಯತ್ ಕಟ್ಟಡಕ್ಕೆ ಅನುದಾನ ಒದಗಿಸಲು ಸಹಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಗ್ರಾಮೀಣಾಭಿವೃದ್ಧಿ ಹಾಗೂ ತಾಲೂಕು ಪಂಚಾಯತ್ ರಾಜ್ ಸಚಿವ ಹೆಚ್.ಕೆ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್, ಶಾಸಕರಾದ ಅಭಯಚಂದ್ರ ಜೈನ್, ಮೊಯಿದಿನ್ ಬಾವಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರಿಗೆ ತಾ.ಪಂ. ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English