ಬೆಳ್ತಂಗಡಿ : ವಿಶ್ವತುಳು ಸಮ್ಮೇಳನದ ತುಳುಗ್ರಾಮದಲ್ಲಿ ಗಾಂಧಿ ಪಾತ್ರಧಾರಿ, ಖ್ಯಾತ ರಂಗಕರ್ಮಿ, ನಾಟಕ ನಿರ್ದೇಶಕ ನವೀನ್ ಎಡಮಂಗಲ (27) ಪಂಜ-ಕಡಬ ರಸ್ತೆಯ ನೆಕ್ಕಿಲದಲ್ಲಿ ಸೆ.11ರಂದು ಬೆಳಿಗ್ಗೆ ಹಿಟಾಚಿ ಯಂತ್ರ ಹೇರಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿ ಹಾಗೂ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಣೇಶೋತ್ಸವ ನಿಮಿತ್ತ ಪಂಜದಲ್ಲಿ ನವೀನ್ ಎಡಮಂಗಲ ನಿರ್ದೇಶನದಲ್ಲಿ ಉಜಿರೆಯ ಎಸ್‌ಡಿ ಎಂ. ಕಾಲೇಜಿನ ರಂಗತರಬೇತಿ ಕೇಂದ್ರದವರಿಂದ ಸೆ.11ರಂದು ರಾತ್ರಿ ನಾಟಕ ನಡೆಯಲಿದ್ದು, ಅವರು ಸೆ.10ರಂದೇ ಪಂಜಕ್ಕೆ ಬಂದು ವೇದಿಕೆ, ರಂಗಸಜ್ಜಿಕೆ ನಿರ್ಮಿಸಿದ್ದರು. ಸೆ.11ರಂದು ಮುಂಜಾನೆ ತಂಡದ ಕಲಾವಿದರನ್ನು ಕರೆತರಲು ತನ್ನ ಬೈಕ ನಲ್ಲಿ ಪಂಜದಿಂದ ಕಡಬಕ್ಕೆ ತೆರಳುತ್ತಿದ್ದಾಗ ಈ ದುರ್ಫಟನೆ ಸಂಭವಿಸಿತು. ಮೃತರು ತಂದೆ ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.
ಎಡಮಂಗಲ ಗ್ರಾಮದ ಮಧೂರಿನ ಆನಂದ ಗೌಡರ ಹಿರಿಯ ಪುತ್ರ ನವೀನ್ ಅವರ ಬೈಕ ಗೆ ಬೆಳಿಗ್ಗೆ 5.45ರ ವೇಳೆಗೆ ಟಿಪ್ಪರ್ ಡಿಕ್ಕಿಯಾಗಿ ಅವರ ತಲೆ, ಹಣೆ, ಕೈಕಾಲಿಗೆ ತೀವ್ರಗಾಯಗಳಾಗಿ ಅವರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟರು. ಪಕ್ಕದ ನಿವಾಸಿಯೋರ್ವರು ಶಬ್ದ ಕೇಳಿ ಬಂದಾಗ ಟಿಪ್ಪರ್ ಪರಾರಿಯಾಗಿತ್ತು. ಊರವರು ನೀಡಿದ ಮಾಹಿತಿಮೇರೆಗೆ ಕಾರ್ಯಾಚರಣೆ ನಡೆಸಿದ ಸುಬ್ರಹ್ಮಣ್ಯ ಪೊಲೀಸರು ಶನಿವಾರ ಮಧ್ಯಾಹ್ನ ಟಿಪ್ಪರ್ ಚಾಲಕನನ್ನು ಗುತ್ತಿಗಾರು ಸಮೀಪದ ಮಡಪ್ಪಾಡಿಯಲ್ಲಿ ಬಂಧಿಸಿ ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ಟಿಪ್ಪರ್‌ಗೆ ಎದುರಿನಲ್ಲಿ ಕೇವಲ ಒಂದು ಹೆಡ್ಲೈಟ್ ಮಾತ್ರ ಇತ್ತು.ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವಾಗಿದೆ.
ವಿದ್ಯಾರ್ಥಿದಿಸೆಯಲ್ಲಿಯೇ ನವೀನ್ ಎಡಮಂಗಲ ಎಡಮಂಗಲ ನಟರಾಗಿ ಬೆಳಕಿಗೆ ಬಂದವರು. ಸುಬ್ರಹ್ಮಣ್ಯ ಕಾಲೇಜಿನಲ್ಲಿದ್ದಾಗ ನಾಟಕಗಳಲ್ಲಿ ಅಭಿನಯಿಸಿದ್ದರು. ನೀನಾಸಂನಲ್ಲಿ ರಂಗಶಿಕ್ಷಕರಾಗಿ ಸೇವೆ ಸಲ್ಲಿಸಿ, ನೀನಾಸಂನ ತಿರುಗಾಟದಲ್ಲೂ ಎರಡು ವರ್ಷ ನಟರಾಗಿ ಕೆಲಸ ಮಾಡಿದ್ದರು. ಕಳೆದ ಒಂದೂವರೆ ವರ್ಷದಿಂದ ಉಜಿರೆಯ ಎಸ್‌ಡಿ ಎಂ ಕಾಲೇಜಿನ ರಂಗತರಬೇತಿ ಕೇಂದ್ರದ ಶಿಕ್ಷಕರಾಗಿದ್ದರು. ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ತುಳುಗ್ರಾಮದಲ್ಲಿ ‘ಗಾಂಧಿ ‘ ಪಾತ್ರಧಾರಿಯಾಗಿ ಮಿಂಚಿದ್ದರು.
Click this button or press Ctrl+G to toggle between Kannada and English
January 30th, 2012 at 23:24:14
8qLsnB pkbieizdhmyj, [url=http://wbbbepjlqycf.com/]wbbbepjlqycf[/url], [link=http://baqqhkgvlgbs.com/]baqqhkgvlgbs[/link], http://uioqfweyjvfd.com/