ಮಂಗಳೂರು: ರಾಜ್ಯದಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಮತ್ತೆ ಕೇಳಲಾರಂಭಿಸಿದೆ. ಅದಕ್ಕೆ ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಧ್ವನಿಗೂಡಿಸಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಉಳಿಯಬೇಕಾದ್ರೆ ಗೃಹ ಸಚಿವ ಪರಮೇಶ್ವರ್ ಸಿಎಂ ಆಗಬೇಕು. ಈ ಬಗ್ಗೆ ಜನರ ಅಪೇಕ್ಷೆಯೂ ಇದೆ. ಆದರೆ ಪಕ್ಷದಲ್ಲಿ ಕೆಲವರು ಸರ್ಕಸ್ ಮಾಡುತ್ತಿದ್ದರೆ, ಪಕ್ಷದಲ್ಲಿ ಶನಿಯ ಪ್ರಭಾವ ಇದೆ, ನಮಗೆ ಶನಿ ಹಿಡಿದಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಸೇರಿ ಕಾಂಗ್ರೆಸ್ ಪಕ್ಷವನ್ನು ಸರಿ ಮಾಡಬೇಕು. ಕೃಷ್ಣ ಅವರ ಜೊತೆ ಸಿಎಂ ಮಾತನಾಡದಿದ್ದರೆ ಅವರು ಮನೆಗೆ ಹೋಗುತ್ತಾರೆ. ಪಕ್ಷ ಬಲವರ್ದನೆ ಆಗಬೇಕಿದ್ದರೆ ಸಿಎಂ ಎಲ್ಲರ ಸಲಹೆಯನ್ನು ಕೇಳಬೇಕಾಗಿದೆ. ಪಕ್ಷವನ್ನು ಕಟ್ಟಿದ್ದು ಕಾಂಗ್ರೆಸ್ ಕಾರ್ಯಕರ್ತರು. ಕಾರ್ಯಕರ್ತರನ್ನು ಸಿಎಂ ಸಿದ್ದರಾಮಯ್ಯ ಅವರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಹರಿಹಾಯ್ದರು ಪೂಜಾರಿ.
ಇನ್ನು ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಪೂಜಾರಿ, ಇದು ಸಮತೋಲಿತ ಬಜೆಟ್ ಆಗಿದ್ದು, ಎಲ್ಲರನ್ನೂ ಸಮಾಧಾನಪಡಿಸಲು ನೋಡಿದ್ದಾರೆ. ಯಾವ ಸರ್ಕಾರದಿಂದಲೂ ಎಲ್ಲರನ್ನೂ ತೃಪ್ತಿ ಪಡಿಸಲು ಸಾಧ್ಯವಾಗಲಿಲ್ಲ. ಯಾವ ಬಜೆಟ್‌ನ್ನು ಶ್ರೀಮಂತರು ಹೊಗಳುತ್ತಾರೊ ಅದು ಬಡವರ ವಿರೋಧಿ ಬಜೆಟ್ ಆಗಿರುತ್ತದೆ ಎಂದರು.
ರೈತರ ಆತ್ಮಹತ್ಯೆಗೆ ಬಜೆಟ್‌ನಲ್ಲಿ ಪರಿಹಾರ ಘೋಸಿಸಿಲ್ಲ, ನಮ್ಮ ರಾಜ್ಯದಲ್ಲಿ ಭೀಕರ ಬರಗಾಲ ಇದೆ. 19 ಸಂಸದರನ್ನು ಆರಿಸಿ ಕಳಿಸಿಕೊಟ್ಟಿದ್ದೇವೆ. ಇವರೆಲ್ಲ ಸೇರಿ ರೈತರ ಸಾಲ ಮನ್ನಾ ಮಾಡುವ ಘೋಷಣೆ ಮಾಡಬೇಕಿತ್ತು ಎಂದರು ಜನಾರ್ದನ ಪೂಜಾರಿ ತಿಳಿಸಿದರು.
ಇನ್ನು ಮೂರನೇ ಮಹಾ ಯುದ್ಧಕ್ಕೆ ಕೆಲ ದೇಶಗಳು ಸಜ್ಜಾಗುತ್ತಿವೆ. ಅಮೆರಿಕ ಬೃಹತ್ ಬಂಕರ್‌ಗಳನ್ನು ಕಟ್ಟುತ್ತಿದೆ. ಮಹಾಯುದ್ಧ ನಡೆದರೆ ಭಾರತಕ್ಕೆ ಉಳಿಗಾಲವಿಲ್ಲ. ದೇಶ ಯಾವ ತಯಾರಿಯೂ ಮಾಡಿಲ್ಲ. ಹೀಗಾಗಿ ದೇಶದ ರಕ್ಷಣೆಗೆ ಪ್ರಧಾನಿ ಮುಂದಾಗಬೇಕು ಎಂದು ಮನವಿ ಮಾಡಿದರು.
Click this button or press Ctrl+G to toggle between Kannada and English