ಮಂಗಳೂರು : ಕೊಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯ ಪಜೀರು ಪೆರ್ನದ ಮನೆಯೊಂದರಿಂದ ಭಾನುವಾರ ಮುಂಜಾನೆ ಸುಮಾರು 3 ಲಕ್ಷ ರೂ. ಮೌಲ್ಯದ 15 ಪವನ್ ಚಿನ್ನಾಭರಣ ಕಳವು ಮಾಡಲಾಗಿದೆ. ಕಳ್ಳರು ಮನೆಯಲ್ಲಿ ಇಬ್ಬರೇ ಇರುವುದನ್ನು ಗಮನಿಸಿ ಕಳ್ಳತನದ ಕೃತ್ಯ ನಡೆಸಿದ್ದಾರೆ .
ಮನೆಯ ಮಾಲೀಕ ಡೆನಿಸ್ ಅಪೋಸ್ ವಿದೇಶದಲ್ಲಿದ್ದು ಫಜೀರು ಪೆರ್ನದ ಅವರ ಮನೆಯಲ್ಲಿ ಡೆನಿಸ್ ಅಪೋಸ್‌ರವರ ಹತ್ತು ವರ್ಷದ ಮಗ ಮತ್ತು ಅತ್ತೆ ಮಾತ್ರ ಮನೆಯಲಿದ್ದರು. ಅವರ ಮನೆಯಲ್ಲಿ ಪತ್ನಿ ಡೊಡ್ಡಿ, ಪುತ್ರ ಡೆನ್ಮರ್,ಅತ್ತೆ ರೊಸಾಲಿನ್ ಡಿ.ಸೋಜ, ಸಹೋದರ ಎವರೆಸ್ಟ್ ಅಪೋಸ್ ಅವರ ಪತ್ನಿ ಪ್ಲೇವಿಯಾ ವಾಸಿಸುತ್ತಿದ್ದಾರೆ. ಡೆನಿಸ್ ಪತ್ನಿ ಡೊಡ್ಡಿ ಶನಿವಾರ ಸಂಬಂಧಿಕರ ಮನೆಗೆ ಹೊಗಿದ್ದು, ಭಾನುವಾರ ಬೆಳಗ್ಗೆ ಎವರೆಸ್ಟ್ ಡಿ.ಸೋಜ ಮತ್ತು ಪ್ಲೇವಿಯಾ ಬೆಳಗ್ಗೆ ಚರ್ಚ್‌ಗೆ ಪೂಜೆಗೆಂದು ಹೋಗಿದ್ದರು.
ಈ ಸಂದರ್ಭದಲ್ಲಿ ಮನೆಗೆ ಬಂದ ಅಪರಿಚಿತರಿಬ್ಬರು ಡೆನ್ವರ್‌ನಲ್ಲಿ ಡೆನಿಸ್ ಮತ್ತು ಎವರೆಸ್ಟ್ ಅವರ ಮನೆ ಯಾವುದೆಂದು ಕೇಳಿದ್ದರು. ಬಳಿಕ ಡೆನ್ವರ್ ತಿಂಡಿ ತಿನ್ನುತ್ತ ಟಿವಿ ನೋಡುತ್ತಿದ್ದರೆ, ಅಜ್ಜಿ ರೋಸಾಲಿನ್ ಡಿ.ಸೋಜಾ ಕೋಣೆಯೊಂದರಲ್ಲಿ ಮಲಗಿದ್ದರು. ಸ್ವಲ್ಪ ಸಮಯದ ಬಳಿಕ ಡೆನ್ವರ್ ತಿಂಡಿಯ ಪ್ಲೇಟ್ ಇಡಲೆಂದು ಅಡುಗೆ ಕೋಣೆಗೆ ಹೋದಾಗ ಅಪರಿಚಿತನೊಬ್ಬ ಮನೆಯ ಕಪಾಟನ್ನು ತಡಕಾಡುತ್ತಿದ್ದು, ಇನ್ನೊಬ್ಬ ಹೊರಗಡೆ ಕಾಯುತ್ತಿದ್ದ ಎನ್ನಲಾಗಿದೆ. ಡೆನ್ವರ್ ಬೊಬ್ಬೆ ಹಾಕಲು ಹೋದಾಗ ಹೊರಗೆ ನಿಂತಿದ್ದಾತ ಹುಡುಗನ ಬಾಯಿಯನ್ನು ಕೈಯಲ್ಲಿ ಮುಚ್ಚಿ ಹಿಡಿದು ಕೈಯನ್ನು ಕಟ್ಟಿ ಹಾಕಿದನೆನ್ನಲಾಗಿದೆ. ಶಬ್ದ ಕೇಳಿ ಹೊರಗೆ ಬಂದ ರೋಸಾಲಿನ್ ಡಿ.ಸೊಜರನ್ನು ನೊಡಿದ ಕಳ್ಳರು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ ಕಳವಾದ ಚಿನ್ನಾಭರಣದ ಒಟ್ಟು ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದು, ಶ್ವಾನ ದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.
Click this button or press Ctrl+G to toggle between Kannada and English
December 16th, 2011 at 06:04:12
5ImzCF advgdihodnlc, [url=http://ikbsaqjcukyc.com/]ikbsaqjcukyc[/url], [link=http://vwevkfdxknbu.com/]vwevkfdxknbu[/link], http://vpfxkxgigscz.com/