ಕಳ್ಳತನ ಮಾಡಿ ದ್ವಿಚಕ್ರ ವಾಹನವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ

3:35 PM, Saturday, February 4th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Barkeಮಂಗಳೂರು: ಕಳ್ಳತನ ಮಾಡಿ ದ್ವಿಚಕ್ರ ವಾಹನವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ಗದಗ ತಾಲೂಕು ಶಿರಹಟ್ಟಿಯ ಸುರೇಶ ಭಜಂತ್ರಿ (21) ಮತ್ತು ಫಕಿರೇಶ ಈಳಿಗೇರ (23) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಹೀರೋ ಫ್ಯಾಶನ್ ಪ್ರೋ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ಶುಕ್ರವಾರ ಬೆಳಗ್ಗೆ ಬಿಜೈನ ಕೆಎಸ್‌‌‌ಆರ್‌‌ಟಿಸಿ ಬಸ್ ಸ್ಟಾಂಡ್ ಸಮೀಪ ವಾಹನ ಮಾರಾಟಕ್ಕೆ ಯತ್ನಿಸುತ್ತಿದ್ದ ಖಚಿತ ಸುಳಿವಿನ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಲೆತ್ನಿಸಿದರು. ಈ ಸಂದರ್ಭ ಇವರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳು ಗದಗ ಲಕ್ಷ್ಮೇಶ್ವರ ನಗರದಲ್ಲಿ ವಾಹನವನ್ನು ಕಳ್ಳತನ ನಡೆಸಿ ನಂಬರ್‌‌ ಪ್ಲೇಟ್‌‌‌ ಬದಲಾಯಿಸಿ ನಗರಕ್ಕೆ ತಂದು ಮಾರಾಟಕ್ಕೆ ಯತ್ನಿಸಿದ್ದರು.

ಬರ್ಕೆ ಠಾಣಾ ಪೊಲೀಸ್ ನಿರೀಕ್ಷಕ ರಾಜೇಶ್ ಎ.ಕೆ., ಅಪರಾಧ ವಿಭಾಗದ ಪಿಎಸ್‍ಐ ನರೇಂದ್ರ, ಎಎಸ್‍ಐ ಪ್ರಕಾಶ್ ಕೆ., ಸಿಬ್ಬಂದಿಗಳಾದ ಗಣೇಶ್, ರಾದೇಶ್, ಕಿಶೋರ್, ಜಯರಾಮ ಕಿಶೋರ್,ನಾಗರಾಜ, ಮಹೇಶ್ ಪಾಟೀಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English