ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 48 ರ ನೆಲ್ಯಾಡಿ ಸಮೀಪದ ಗೋಳಿತ್ತೂಟ್ಟು ಎಂಬಲ್ಲಿ ರಿಟ್ಜ್ ಕಾರು ಮತ್ತು ಟಿಪ್ಪರ್ ಡಿಕ್ಕಿ ಹೊಡೆದು ಓರ್ವ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲೇ ಮೃತ ಪಟ್ಟ ಘಟನೆ ನಿನ್ನೆ ನಡೆದಿದೆ.
ಮೃತರು ಮಂಜೇಶ್ವರ ಆನೆಕಲ್ಲು ನಿವಾಸಿ ಮಮ್ಮದರ ಪುತ್ರ ಅಬ್ದುಲ್ ರಝಾಕ್(36ವ).ಇವರು ಈಗ 2 ವರ್ಷಗಳಿಂದ ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿಯಲ್ಲಿ ಬಾಡಿಗೆಗೆ ವಾಸವಿದ್ದು ಬ್ರೋಕರ್ ಕೆಲಸ ಮಾಡುತ್ತಿದ್ದರು.ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ.
ಟಿಪ್ಪರ್ ಜಲ್ಲಿ ಇಳಿಸಲು ಹಿಂದಕ್ಕೆ ಚಲಾಸುತ್ತಿದ್ದಾಗ ಉಪ್ಪಿನಂಗಡಿ ಕಡೆಯಿಂದ ಹಾಸನಕ್ಕೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ಟಿಪ್ಪರ್ ಚಲಾಯಿಸಿತ್ತಿದ್ದ ಸರ್ಫುದ್ದೀನ್ (32ವ) ಹಾಗೂ ಅಜರುದೀನ (26ವ) ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತವಾದ ಕ್ಷಣ ನೆಲ್ಯಾಡಿ ಪೋಲೀಸ್ ಠಾಣೆಯ ಎಎಸ್‌ಐ ಜಿನ್ನಪ್ಪ ,ಸೀತಾರಾಮ ,ಮೋಹನ ಡಿ,ಸಂಚಾರಿ ಪೋಲೀಸ್‌ಅಧಿಕಾರಿ ನಾಗೇಶ್ ಕದ್ರಿ,ಕರುಣಾಕರ, ಗೋಳಿತ್ತೂಟ್ಟು ಗ್ರಾ.ಪಂ.ಅಧ್ಯಕ್ಷ ಪೂವಪ್ಪ ಕರ್ಕೇರ,ಪ್ರಕಾಶ್,ಪುರುಷೋತ್ತಮ ಮುಂತಾದವರು ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
Click this button or press Ctrl+G to toggle between Kannada and English