ಮಂಗಳೂರು: ಉಳ್ಳಾಲದಲ್ಲಿ ಅನುಮತಿ ಇಲ್ಲದೆ ರದ್ದುಗೊಂಡ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕರ್ನಾಟಕ 10ನೇ ವರ್ಷಾಚರಣೆ ನಗರದ ನೆಹರೂ ಮೈದಾನದಲ್ಲಿ ನಡೆಯಿತು.
ಪಿ.ಎಫ್ಐ. ದ.ಕ. ಜಿಲ್ಲಾ ಸಮಿತಿಯಿಂದ ನಡೆದ ಸಮಾವೇಶದಲ್ಲಿ ಮಾತನಾಡಿದ ಪಿಎಫ್ಐ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ. ಶರೀಫ್ ದೇಶದಲ್ಲಿ ಸಂಘ ಪರಿವಾರವು ಕೋಮುವಾದದ ವಿಷ ಬೀಜ ಬಿತ್ತುತ್ತಿದೆ. ದೇಶದ ಆಡಳಿತ ಸಂಘ ಪರಿವಾರದ ಕಪಿಮುಷ್ಠಿಯಲ್ಲಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎಂದು ಆರೋಪಿಸಿದರು.
ಕೆಂಪುಕೋಟೆ ಮತ್ತು ನ್ಯಾಯಾಲಯಗಳ ಬಣ್ಣ ಕೇಸರೀಕರಣಗೊಳ್ಳುತ್ತಿವೆ. ಅದು ಸಂಪೂರ್ಣಗೊಳ್ಳುವ ಮುನ್ನ ಈ ನಾಡಿನ ಪ್ರಜ್ಞಾವಂತರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿದರು.
ಪಿಎಫ್ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಜಾಕ್ ಕೆಮ್ಮಾರ ಅಧ್ಯಕ್ಷತೆ ವಹಿಸಿದ್ದರು.
ಚಿಂತಕ ಯೋಗೇಶ್ ಮಾಸ್ಟರ್, ಯುನಿವೆಫ್ ರಾಜ್ಯಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಕೇರಳದ ಹ್ಯೂಮನ್ ರಿಸೋರ್ಸ್ ಫೌಂಡೇಶನ್ ಡೆವಲಪ್‌ಮೆಂಟ್ ಎಂ.ಕೆ. ಅಬ್ದುಲ್ ಮಜೀದ್ ಕಾಸಿಮಿ, ಸಮಾಜ ಪರಿವರ್ತನಾ ವೇದಿಕೆಯ ಅಧ್ಯಕ್ಷ ಡೀಕಯ್ಯ, ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಮಾತನಾಡಿದರು.
Click this button or press Ctrl+G to toggle between Kannada and English