ಕರಾವಳಿ ಸೌಹಾರ್ದ ಸಮಾವೇಶದ ಸಿದ್ಧತೆಗಾಗಿ ಸಿಪಿಐಎಂ ಕಾಲ್ನಡಿಗೆ ಜಾಥಾ

12:01 AM, Friday, February 24th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

cpim ಮಂಗಳೂರು : ನೆಹರೂ ಮೈದಾನದಲ್ಲಿ ಫೆ. 25ರಂದು ಸಿಪಿಎಂ ವತಿಯಿಂದ ನಗರದಲ್ಲಿ ನಡೆಯುವ ಕರಾವಳಿ ಸೌಹಾರ್ದ ರ್ಯಾಲಿ ಹಾಗೂ ಸಮಾವೇಶ ಪ್ರಯುಕ್ತ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಐಎಂ ಹಮ್ಮಿಕೊಂಡಿದ್ದ ಕಾಲ್ನಡಿಗೆ  ಜಾಥಾಕ್ಕೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಚಾಲನೆ ನೀಡಿದರು.

ಸೌಹಾರ್ದ ರ‍್ಯಾಲಿಯನ್ನು ನಿಲ್ಲಿಸಿ ಇಲ್ಲದಿದ್ದರೆ ಬಂದ್ ಕರೆ ನೀಡಿರುವುದನ್ನು ವಾಪಾಸು ಪಡೆಯಿರಿ ಸಂಘಪರಿವಾರದ ಯಾವ ಬೆದರಿಕೆಗೂ ಮಣಿಯುವುದಿಲ್ಲ. ಬಂದ್ ಇದ್ದರೂ ಕಾಲ್ನಡಿಯಲ್ಲಾದರೂ ಬಂದು ನೆಹರೂ ಮೈದಾನದಲ್ಲಿ ಸೇರುವ ಮೂಲಕ ಸೌಹಾರ್ದ ಸಮಾವೇಶವನ್ನು ಯಶಸ್ವಿಗೊಳಿಸುತ್ತೇವೆ ಎಂದು ಮುನೀರ್ ಕಾಟಿಪಳ್ಳ ಸಂಘಪರಿವಾರಕ್ಕೆ ಸವಾಲು ಹಾಕಿದ್ದಾರೆ.

ಸುಮಾರು 25 ವರ್ಷಗಳಿಂದ ಕೋಮು ಸೌಹಾರ್ದವಾಗಿ ಜೀವಿಸುತ್ತಿದ್ದ ಜನರಲ್ಲಿ ಮತೀಯ ಕಲಹವನ್ನು ಹುಟ್ಟುಹಾಕಲಾಗಿದೆ. ಜನರನ್ನು ಧರ್ಮಾಧಾರದಲ್ಲಿ ಗುರುತಿಸುವ ಹಾಗೂ ದ್ವೇಷ ನೋಡುವ ಭಾವನೆ ಉದ್ಭವವಾಗಿದೆ ಎಂದರು.

cpim ಗುಜರಾತ್ ಕೋಮು ಗಲಭೆಯ ಬಳಿಕ ಅದೇ ರಾಜ್ಯ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಇತರ ರಾಜ್ಯಗಳಿಗೆ ಭೇಟಿ ನೀಡಿದಾಗ ನಿಷೇಧ ಹೇರಿಲ್ಲ. ಬಂದ್ ಮಾಡಿಲ್ಲ. ಆದರೆ, ಶೋಷಿತರ, ಜನಪರ ಹೋರಾಟಗಾರದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೇಟಿಗೆ ತಡೆಯನ್ನುಂಟು ಮಾಡುವುದು, ಬಂದ್ ಆಚರಿಸುವುದು ಅಸಾಂವಿಧಾನಿಕವಾದುದು ಎಂದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಕಾರ್ಪೊರೇಟರ್ ದಯಾನಂದ ಶೆಟ್ಟಿ, ಯೋಗೀಶ್ ಜಪ್ಪಿನಮೊಗಲು, ಡಿವೈಎಫ್‌ಐ ಮುಖಂಡರಾದ ಸಂತೋಷ್ ಬಜಾಲ್, ಬಿ.ಕೆ.ಇಮ್ತಿಯಾಝ್, ಸಾದಿಕ್ ಕಣ್ಣೂರು, ಎಸ್‌ಎಫ್‌ಐನ ನಿತಿನ್ ಕುತ್ತಾರ್, ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ, ಮಾಜಿ ಕಾರ್ಪೊರೇಟರ್ ಜಯಂತಿ ಶೆಟ್ಟಿ, ನೌಷಾದ್ ಬೆಂಗರೆ, ಸಿಪಿಐಎಂ ಮುಖಂಡ ಸಂತೋಷ್ ಶಕ್ತಿನಗರ, ಭಾರತಿ ಬೋಳಾರ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English