ಮಂಗಳೂರು : ಕಟ್ಟಪಾಡಿ ಕಟ್ಟಪ್ಪ ತುಳು ಚಿತ್ರದ ಆಡಿಯೋ ರೆಕಾರ್ಡಿಂಗ್ ಮುಹೂರ್ತ ಕಾರ್ಯಕ್ರಮವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬುಧವಾರ ಮಾರ್ಚ್ 01 ರಂದು ಬಲ್ಮಠದಲ್ಲಿರುವ ಕ್ಯಾಡ್ ಸ್ಟುಡಿಯೋದಲ್ಲಿ ಉಧ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, ‘ಬರಪೀಡಿತ ಎಂದು ಘೋಷಣೆಯಾದ ನಂತರ ಮೊದಲ ಬಾರಿ ಮಂಗಳೂರಿಗೆ ಭೇಟಿ ನೀಡಿದ್ದೇನೆ. ನೀರು, ಗಡಿ ವಿಷ್ಯದಲ್ಲಿ ನಾವು ಒಗ್ಗಟ್ಟಾಗಿ ಇರಬೇಕು . ಮಂಗಳೂರು ಅಷ್ಟೇ ಅಲ್ಲ, ಮಂಡ್ಯ, ಕೊಪ್ಪಳ ಸಹ ಬರಪೀಡಿತ ಜಿಲ್ಲೆಯಾಗಿದೆ. ಬರಮುಕ್ತ ನಾಡನ್ನ ನಾವು ಕಟ್ಟಬೇಕಾಗಿದೆ. ನಾವು ಒಗ್ಗಟ್ಟಾಗಿದ್ದರೆ ಯಾವುದೇ ಸಮಸ್ಯೆಗೂ ಪರಿಹಾರ ಹುಡುಕಬಹುದು’ ಎಂದರು.
‘ ಐ ಲವ್ ಮಂಗಳೂರು ಎಂದ ಶಿವರಾಜ್ ಕುಮಾರ್, ಮಂಗಳೂರನ್ನ ಅಪ್ಪಾಜಿ ಇಷ್ಟಪಟ್ಟಿದ್ದರು’ ಎತ್ತಿನಹೊಳೆ ಯೋಜನೆಗೆ ಕನ್ನಡ ಚಿತ್ರರಂಗದಿಂದ ಸಂಪೂರ್ಣ ಬೆಂಬಲವಿದೆ, ಹೋರಾಟ ಅನಿವಾರ್ಯವಿದ್ದರೆ ಕರಾವಳಿ ಜನರ ಜೊತೆ ನಾವು ಇದ್ದೇವೆ ಎಂದು ಹೇಳಿದರು.
ಡಬ್ಬಿಂಗ್ ವಿಚಾರವಾಗಿ ಮಾತನಾಡಿ, ನಾನು ಮೊದಲಿನಿಂದೂ ಡಬ್ಬಿಂಗ್ ವಿರೋಧಿಸುತ್ತಾ ಬಂದಿದ್ದೇನೆ, ಕನ್ನಡದಲ್ಲಿಯೇ ಉತ್ತಮ ಚಿತ್ರಕಥೆಗಳಿದ್ದು ಡಬ್ಬಿಂಗ್ ನ ಅವಶ್ಯಕತೆ ಇಲ್ಲ ಎಂದರು.
ತುಳು ಚಿತ್ರನಟ ದೇವದಾಸ್ ಕಾಪಿಕಾಡ್, ವಿಜಯ್ ಕುಮಾರ್ ಕೊಡಿಯಾಲ್ ಬೈಲ್ , ಪ್ರಕಾಶ್ ಪಾಂಡೇಶ್ವರ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English