ಮುದ್ರಣ ಮಾಧ್ಯಮದ ಸುದ್ದಿ ನಿಖರ : ರಾಜಗೋಪಾಲ್ ರೈ

12:59 AM, Thursday, March 9th, 2017
Share
1 Star2 Stars3 Stars4 Stars5 Stars
(No Ratings Yet)
Loading...

Kannada Chinthana Malikeಮಂಗಳೂರು : ಪತ್ರಿಕೆ ನಡೆಸುವ ಕೆಲಸ ಸುಲಭವಲ್ಲ. ಅಂಥದ್ದರಲ್ಲಿ ಸಾಹಿತ್ಯ ಕಾರ‍್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಭಾವಂತರನ್ನು ಸನ್ಮಾನಿಸುತ್ತಿರುವುದು ಅಭಿನಂದನೀಯ. ಎಂದು ಮಾಯಿಥಾಯ್ ಅಸೋಸಿಯೇಶನ್ ಆಫ್ ಕರ್ನಾಟಕ ಇದರ ರಾಜ್ಯಾಧ್ಯಕ್ಷ ರಾಜಗೋಪಾಲ ರೈ ನುಡಿದರು. ಮುದ್ರಣ ಮಾಧ್ಯಮ ಸುದ್ದಿ ನೀಡುವಲ್ಲಿ ಹೆಚ್ಚು ನಿಖರತೆ ಕಾಯ್ದುಕೊಂಡಿದೆ ಎಂದರು. ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮಂಜುನಾಥ್ ಎಜ್ಯುಕೇಶನ್ ಟ್ರಸ್ಟ್ (ರಿ), ಹೃದಯವಾಹಿನಿ – ಕರ್ನಾಟಕ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ಚಿಂತನ ಮಾಲಿಕೆ – 7 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉದಯವಾಣಿ ಸುದ್ಧಿ ವಿಭಾಗದ ಮುಖ್ಯಸ್ಥ ಡಾ|| ಮನೋಹರ್ ಪ್ರಸಾದ್ ಕನ್ನಡ ಚಿಂತನ ಉಪನ್ಯಾಸವಿತ್ತರು. ತಮ್ಮ ಭಾಷಣದಲ್ಲಿ ಮನೋಹರ ಪ್ರಸಾದ್ ಇಂತಹ ಕಾರ್ಯಕ್ರಮಗಳಿಂದ ಕನ್ನಡ ಕಟ್ಟುವ ಕೆಲಸ ಆಗುತ್ತದೆ. ಈ ಜಗತ್ತಿನಲ್ಲಿ ಅನೇಕ ಭಾಷೆಗಳು ಮಾಯಾವಾಗುತ್ತಾ ಇವೆ. ಹಾಗಾಗಿ ಕನ್ನಡ ಜಾಗೃತಿ ಕಾರ್ಯಕ್ರಮಗಳು ಆಗಾಗ, ಅಲ್ಲಲ್ಲಿ ನಡೆಯಬೇಕು ಎಂದರು.

ಮಕ್ಕಳು ಓದೋಹವ್ಯಾಸ ಬೆಳೆಸಿಕೊಳ್ಳಬೇಕುಎಂದ ಮನೋಹರಪ್ರಸಾದ್, ಬದಲಾದ ಇಂದಿನ ತಂತ್ರಜ್ಞಾನಯುಗದಲ್ಲಿ ಓದುವಿಕೆ ಹಿಂದೆ ಬಿದ್ದಿದೆ, ಹಳೆಯ ಕನ್ನಡದ ಹಾಡುಗಳನ್ನು ಅರ್ಥ ಮಾಡಿಕೊಂಡು ಓದಿದರೆ ಸಿಗುವ ಆನಂದ ಅಪರಿಮಿತವಾದುದ್ದು. ಸಾಹಿತ್ಯ ಅಭ್ಯಾಸ ನಮಗೆ ತಾಳ್ಮೆ, ಸಹನೆ, ಏಕಾಗ್ರತೆಗಳನ್ನು ಕೊಡುತ್ತದೆ: ಎಂದರು.

ಹೃದಯವಾಹಿನಿ ಕರ್ನಾಟಕ ಮಂಗಳೂರು ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ ಕರ್ನಾಟಕ ನಗರ ಪ್ರದೇಶಗಳಲ್ಲಿ ಹೊರರಾಜ್ಯದವರು ನೆಲೆಸುತ್ತಿದ್ದಾರೆ. ಅವರಿಗೆ ಕನ್ನಡ ಕಲಿಸುವ ಕಾರ್ಯಕ್ರಮ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನಡೆಯುತ್ತಿದೆ. ಅದಕ್ಕೆ ಎಲ್ಲಾ ಕನ್ನಡಿಗರು ಕೈಜೋಡಿಸಬೇಕು ಎಂದರು.

ಮಹಿಳಾ ಐಟಿಐ ತರಬೇತಿ ಅಧಿಕಾರಿ ಮಮತಾ.ಎಲ್.ಎಸ್, ಮ.ನ.ಪಾ. ಸ.ನಗರ ಯೋಜನಾಧಿಖಾರಿ ದಿಲೀಪ್ ಕುಮಾರ್, ರಂಗಭೂಮಿ ಕಲಾವಿದ ವಿ.ಜಿ ಪಾಲ್, ಸನ್ಮಾನಿತ ಕವಿ ಬದ್ರುದ್ಧೀನ್ ಕೂಳೂರು ಉಪಸ್ಥಿತರಿದ್ದರು.

ಗೆಳತಿಯರು ಮಂಗಳೂರು ತಂಡದವರಿಂದ ಕನ್ನಡ ಗೀತೆಗಳ ಕಾರ್ಯಕ್ರಮ ನಡೆಯಿತು. ಉಪನ್ಯಾಸಕ ಲೋಕೇಶ್ ವಂದಿಸಿದರು, ಸಾಹಿತಿ ಕಾಸರಗೋಡು ಅಶೋಕ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English