ಲಂಡನ್ : ಲಂಡನ್ ನಲ್ಲಿ ಕಳೆದ ಮೂರು ದಿನಗಳಿಂದ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಉಪ ನಗರದಲ್ಲಿರುವ ಶತಮಾನದಷ್ಟು ಹಳೆಯ ಅಂಗಡಿ ಬೆಂಕಿಗಾಹುತಿಯಾಗಿದೆ. ಕ್ರೋಯ್‌ಡೋನ್‌ನಲ್ಲಿದ್ದ ಹೌಸ್ ಆಫ್ ರೀವ್ 144 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿತ್ತು. ನಗರದಾದ್ಯಂತ ಹಿಂಸಾಚಾರ ನಡೆಸುತ್ತಿದ್ದ ದುಷ್ಕರ್ಮಿಗಳು ಈ ಅಂಗಡಿಯನ್ನು ಮಂಗಳವಾರ ಲೂಟಿ ಮಾಡಿ ಬೆಂಕಿ ಹಚ್ಚಿದ್ದಾರೆ.
ಅಂಗಡಿ ಬೆಂಕಿಗಾಹುತಿಯಾಗಿದ್ದರಿಂದ ಮನನೊಂದು ಗದ್ಗದಿತರಾಗಿ ಮಾತನಾಡಿದ ಅಂಗಡಿಯ ಮಾಲೀಕ ಗ್ರಾಹಂ ರೀವ್ಸ್, ನಾನು ಈ ಅಂಗಡಿಯನ್ನು ನಡೆಸುತ್ತಿದ್ದ ಐದನೇ ತಲೆಮಾರಿನವರು, ನನಗೂ ಇಬ್ಬರು ಹೆಣ್ಣುಮಕ್ಕಳಿದ್ದು, ಅವರು ಆರನೇ ಪೀಳಿಗೆಯವರಾಗಿದ್ದಾರೆ ಎಂದು ಹೇಳಿದ್ದಾರೆ.
ಎಡ್ವಿನ್ ರೀವ್ಸ್ ಅವರು ಕ್ರೋಯ್‌ಡೋನ್‌ನಲ್ಲಿ 1867ರಲ್ಲಿ ಅಂಗಡಿಯನ್ನು ಪ್ರಾರಂಭಿಸಿದರು. ವ್ಯಾಪಾರ ಅಭಿವೃದ್ಧಿಯಾಗಿದ್ದರಿಂದ ಅಂಗಡಿಯು ಮುಂದಿನ ಪೀಳಿಗೆಗೂ ಹಸ್ತಾಂತರವಾಯಿತು. ನಾನು ಈ ಅಂಗಡಿಯನ್ನೇ ಅವಲಂಬಿಸಿದ್ದು, ನನ್ನ ಜೀವನದ ಬಹು ಬಾಗವನ್ನು ಇಲ್ಲೇ ಕಳೆದಿದ್ದೇನೆ, ಅಂಗಡಿಯನ್ನು ಹಾಳುಮಾಡಿರುವುದು ನನಗೆ ಆಘಾತ ಮೂಡಿಸಿದೆ ಎಂದು ಗ್ರಾಹಂ ರೀವ್ಸ್ ಹೇಳಿದರು. ಲೂಟಿಕೋರರು ಅಂಗಡಿಗೆ ಬೆಂಕಿ ಹಚ್ಚಿದ್ದರಿಂದ ತಮ್ಮ ಪತ್ನಿಯೂ ಆಘಾತಕ್ಕೊಳಗಾಗಿದ್ದಾರೆ. ಅಂಗಡಿಯಿಂದ ಯಾವುದೇ ವಸ್ತುಗಳನ್ನು ಕಳವು ಮಾಡಲಾಗಿಲ್ಲ ಆದರೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ ಎಂದು ಅವರು ಹೇಳಿದರು.
Click this button or press Ctrl+G to toggle between Kannada and English