ಮಂಗಳೂರು : ನನ್ನ ಜಾತಿ -ಧರ್ಮವೇ ಶ್ರೇಷ್ಠ ಎನ್ನುವ ಕೊಲೆಗಡುಕರು, ಹಿಡಿ-ಬಡಿ-ಕೊಲ್ಲು ಎಂದು ಆದೇಶಿಸುವವರು, ಬೆಂಕಿ ಹಚ್ಚುತ್ತೇವೆಂದು ಕಾರ್ಯಾಚರಿಸುವವರು, ಬೆನ್ನಟ್ಟಿ ಬಡಿಯುತ್ತೇವೆಂದು ಬೊಬ್ಬಿಡುವವರು, ಮಹಿಳೆಯನ್ನು ಭಾರತ ಮಾತೆ ಎಂದು ಕೊರೆಯುವವರು ಮಹಿಳಾ ಬೀಡಿ ಕಾರ್ಮಿಕರಿಗೆ ಕೆಲಸವಿಲ್ಲದಾಗ ಎಲ್ಲಿ ಹೋಗಿದ್ದರು ? ಬೀಡಿ ಕೈಗಾರಿಕೆಯ ಅವನತಿಗೆ ಕಾರಣವಾಗುವ ‘ಕೊಟ್ಪಾ’ ಕಾಯ್ದೆಯನ್ನು ಜ್ಯಾರಿ ಮಾಡಿದಾಗ, ಬೀಡಿ ಕಾರ್ಮಿಕಳ ಹೆಣ್ಣು ಮಕ್ಕಳು- ಸೌಜನ್ಯಾಳಂತವರು ಕಾಮುಕರಿಗೆ ಬಲಿಯಾದಾಗ ‘ಸ್ತ್ರೀ ಭಾಗ್ಯ’ದ, ‘ಭಾರತ ಮಾತೆ’ಯ ನೆನೆಪಾಗಲಿಲ್ಲವೇಕೆ ? ವಿನಾಯಕ ಬಾಳಿಗಾ -ಹರೀಶ್ ಪೂಜಾರಿ- ಪ್ರವೀಣ್ ಪೂಜಾರಿಯಂತವರು ಹತ್ಯೆಯಾದಾಗ, ಕಪಟ ನಾಯಕರ ಸ್ವಾರ್ಥ ಸಂಚಿಗೆ ಬಲಿಯಾಗಿ ಬಡ ಯುವ ಪೀಳಿಗೆ ಜೈಲು ಪಾಲಾಗುತ್ತಿರುವಾಗ ಜಾತಿ-ಧರ್ಮ ಎಲ್ಲಿ ಹೋಯಿತು ? ಈ ಎಲ್ಲಾ ಅವ್ಯವಸ್ಥೆಗಳ ವಿರುದ್ಧ ಸಿಡಿದೆದ್ದು ತಮ್ಮ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ನೀಡಿ ಅವರನ್ನು ಪ್ರಜ್ಞಾವಂತ ನಾಗರಿಕರಾಗಿ ರೂಪುಗೊಳಿಸಬೇಕಾದ ಜವಾಬ್ಧಾರಿ ನಮ್ಮ ಮಹಿಳೆಯರ ಮೇಲಿದೆ. ಇದಕ್ಕಾಗಿ ನಾವು ರಾಜಕೀಯವಾಗಿ ಜಾಗೃತರಾಗಿ ಕಾರ್ಯಾಚರಿಸಬೇಕೆಂದು ಶ್ರೀಮತಿ ಸುಲೋಚನಾ ಹರೀಶ್, ಕವತ್ತಾರು ಕರೆ ನೀಡಿದರು.
ಎಐಟಿಯುಸಿ ನೋಂದಾಯಿತ ಬೀಡಿ ಎಂಡ್ ಟೊಬೆಕ್ಕೊ ಲೇಬರ್ ಯೂನಿಯನ್‌ನ 81 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯಲ್ಲಿ ಅವರು ಮಾತನಾಡುತ್ತಿದ್ದರು.
ಬಿಜೆಪಿ ಪಕ್ಷವೆಂಬುದು ಸುಳ್ಳಿನ ಪಾಠ ಶಾಲೆ, ಅವರ ನಾಯಕ ಮೋದಿಯವರಿಗೆ ನಟನಾ ಸಾಮರ್ಥ್ಯವಿದೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಅಧಿಕಾರ ಪಡೆಯುವುದೇ ಮುಖ್ಯವಾಗಿದೆಯೇ ಹೊರತು ಜನಸಾಮಾನ್ಯರ-ಕಾರ್ಮಿಕರ ಹಿತ ಮುಖ್ಯವಲ್ಲ. ಭಾಗ್ಯಗಳ ಸರದಾರ ಸಿದ್ಧರಾಮಯ್ಯರನ್ನು ಕೆಲಸ ಮಾಡಲು ಬಿಡದ ಕಾಂಗ್ರೆಸ್‌ಗೆ ಸ್ವಾರ್ಥವೇ ಮೇಲಾಯಿತು. ಕೋಮು ಸಂಘರ್ಷದ ಹೇಳಿಕೆ ನೀಡುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿಯವರಿಂದ ಸಾಮಾಜಿಕ ನ್ಯಾಯದ ಅಭಿವೃದ್ಧಿಯನ್ನು ನಿರಿಕ್ಷಿಸುವಂತಿಲ್ಲ. ಜನರಿಂದ ಆಯ್ಕೆಯಾಗದವರಿಗೆ ಉಪಮುಖ್ಯ ಮಂತ್ರಿ ಜವಾಬ್ಧಾರಿಗಳನ್ನು ನೀಡಿರುವುದು ಅಧಿಕಾರಕ್ಕಾಗಿನ ದಾಹವಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕವೂ ಸ್ವಾರ್ಥಿಗಳ, ಅಧಿಕಾರದಾಹಿಗಳ, ಭ್ರಷ್ಠಾಚಾರಿಗಳ ಆಳ್ವಿಕೆಗೊಳಗಾಗುವುದು ನಿಶ್ಚಿತ. ಈ ಬಗ್ಗೆ ಜನರು ರಾಜಕೀಯವಾಗಿ ಜಾಗೃತಿಯಾಗಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಕರೆ ನೀಡಿದರು.
ಎಐಟಿಯುಸಿ ನಾಯಕರುಗಳಾದ ಬಿ. ಶೇಕರ್, ಎ..ಪಿ ರಾವ್, ಚಂದಪ್ಪ ಅಂಚನ್ ಮಾತನಾಡಿದರು. ಸುರೇಶ್ ಕುಮಾರ್, ಕೆ. ಈಶ್ವರ್, ಸರಸ್ವತಿ ಕೆ., ದಯಾವತಿ, ಗುಣವತಿ ಮುಂತಾದವರು ಉಪಸ್ಥಿತರಿದ್ದರು. ಗತ ಸಾಲಿನ ವರದಿ ಮತ್ತು ಲೆಕ್ಕ ಪತ್ರವನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು.
ಪದಾಧಿಕಾರಿಗಳು: ಮುಂದಿನ ಅವಧಿಗೆ 59 ಜನರ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಸುಲೋಚನ ಕವತ್ತಾರು, ಉಪಾಧ್ಯಕ್ಷರುಗಳಾಗಿ ಹೆಚ್. ವಿ ರಾವ್, ಎಂ. ಶಿವಪ್ಪ ಕೋಟ್ಯಾನ್, ಸೆಲಿಮತ್ ಪಂಜಿಮೊಗರು, ಕಾರ್ಯದರ್ಶಿಯಾಗಿ ವಿ.ಎಸ್. ಬೇರಿಂಜ, ಕೋಶಾದಿಕಾರಿಯಾಗಿ ಎಂ. ಕರುಣಾಕರ್, ಜೊತೆ ಕಾರ್ಯದರ್ಶಿಗಳಾಗಿ ಚಿತ್ರಾಕ್ಷಿ ಕುಂಜತ್ತ್‌ಬೈಲ್, ರೂಪಾ ಸಿದ್ದಾರ್ಥನಗರ, ದಯಾವತಿ ಕರ್ನಿರೆ- ಇವರುಗಳನ್ನು ಸರ್ವಾನುಮತದಿಂದ ಆರಿಸಲಾಯಿತು.
Click this button or press Ctrl+G to toggle between Kannada and English