ಮಂಗಳೂರು : ಅಹಮ್ಮದ್ ಖುರೇಷಿ ಮೇಲೆ ದೌರ್ಜನ್ಯ ವಿಚಾರದಲ್ಲಿ ಯಾರೂ ಕೂಡಾ ಕಾಂಗ್ರೆಸ್ ಮತ್ತು ಅದರ ನಾಯಕರ ವಿರುದ್ಧ ಆರೋಪ ಹೊರಿಸುವುದು ಸರಿಯಲ್ಲ” ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರು ಪಕ್ಷದ ವಿರುದ್ಧ ಹೇಳಿಕೆ ನೀಡಬಾರದು ಎಂದು ಜಿಲ್ಲಾ ಕಾಂಗ್ರೆಸ್ಸಿನ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ಬಜರಂಗದಳದಂತೆ ಪಿ ಎಫ್ ಐ ಸಂಘಟನೆ ಕೂಡಾ ಕೋಮುವಾದಿ ಸಂಘಟನೆ” ಎಂದ ಅವರು, “ಪಿ ಎಫ್ ಐ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ. ಖುರೇಷಿ ಮೇಲೆ ನಿಜಕ್ಕೂ ದೌರ್ಜನ್ಯ ನಡೆದಿದ್ದರೆ ಪೊಲೀಸ್ ಆಯುಕ್ತರನ್ನು ಕಂಡು ಮಾತನಾಡಬಹುದಾಗಿತ್ತು. ಅದು ಬಿಟ್ಟು ರಸ್ತೆ ಬ್ಲಾಕ್ ಮಾಡಿ ಪ್ರತಿಭಟನೆ ನಡೆಸಿದ್ದು ಸರಿಯಲ್ಲ. ಇವರು ಪೊಲೀಸ್ ಕಮಿಷರನ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿರುವುದು ಖಂಡನೀಯ” ಎಂದಿದ್ದಾರೆ.
“ಕಾಂಗ್ರೆಸ್ ಜಾತ್ಯಾತೀತ ಪಕ್ಷವಾಗಿದ್ದು ಎಲ್ಲರನ್ನೂ ಸಮಾನವಾಗಿ ಕಾಣುತ್ತಿದೆ. ಕಾಂಗ್ರೆಸ್ ಪಕ್ಷ ಕ್ಷೀಣಿಸಲು ಅಸಂಬದ್ಧ ಹೇಳಿಕೆಗಳನ್ನು ನೀಡುವ ಪಕ್ಷದ ಕಾರ್ಯಕರ್ತರೇ ಕಾರಣರಾಗುತ್ತಾರೆ. ಇದು ಸಹನೀಯವಲ್ಲ” ಎಂದು ಹೇಳಿದರು
Click this button or press Ctrl+G to toggle between Kannada and English