ಮಂಗಳೂರು : ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉರ್ವಸ್ಟೋರಿನ ರೇಡಿಯೋ ಗುಡ್ಡದಲ್ಲಿ ನಿರ್ಮಿಸಿರುವ ಕೋಟೆದ ಬಬ್ಬು ಸ್ವಾಮಿ ಹಾಗೂ ಪರಿವಾರ ದೈವಗಳ ಪೀಠವನ್ನು ಏಕಾಏಕಿ ತೆರವುಗೊಳಿಸಿದ ಧೋರಣೆಯನ್ನು ವಿರೋಧಿಸಿ ಶ್ರೀಕೋಟೆದ ಬಬ್ಬು ಸ್ವಾಮಿ ದೈವಸ್ಥಾನ ಸೇವಾ ಸಮಿತಿಯು ಸೋಮವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ದೈವಗಳ ವಾರ್ಷಿಕ ನೇಮೋತ್ಸವವನ್ನು ಮಾಸಿಕ ಸಂಕ್ರಮಣದಲ್ಲಿ ಪೀಠದ ಸ್ಥಳದಲ್ಲಿ ನಡೆಸಲಾಗುತ್ತಿದೆ. ಈಗ ಅದೇ ಸ್ಥಳದಲ್ಲಿ ಸಮಾಜ ಕಲ್ಯಾಣ ಇಲಾಖೆ ಪೀಠವನ್ನು ದಿಢೀರನೆ ತೆರವುಗೊಳಿಸಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾಗಿದೆ. ಸಮಿತಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ದೈವದ ಪೀಠ ಸ್ಥಾಪಿಸಲು ಅವಕಾಶ ನೀಡದೆ ನಿರಾಕರಿಸಿರುವುದು ಖಂಡನೀಯ ಎಂದು ಸಮಿತಿಯ ಅಧ್ಯಕ್ಷ ರೋಹಿತಾಕ್ಷ ಹೇಳಿದರು.
ಈ ಸಂದರ್ಭ ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಮುಖಂಡ ವೇದವ್ಯಾಸ ಕಾಮತ್, ಗಗ್ಗರ ಮಾನಾದಿಗೆದ ಚಾವಡಿ ಅಧ್ಯಕ್ಷ ಕೆ.ಕೆ.ಪೇಜಾವರ, ಕೋಶಾಧಿಕಾರಿ ಉದಯ ಆಚಾರ್, ಸದಸ್ಯ ಪ್ರವೀಣ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English