ಆಳ್ವಾಸ್ ನಲ್ಲಿ ಯುಪಿಎಸ್ಸಿ ಟಾಪರ್ ನಂದಿನಿ ಕೆ.ಆರ್

7:26 PM, Thursday, June 8th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Nandiniಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿ, ಯುಪಿಎಸ್ಸಿ ಟಾಪರ್ ನಂದಿನಿ ಕೆ.ಆರ್ ಕುಟುಂಬ ಸಹಿತ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರನ್ನು ಹಂಸನಗರದ ಶೋಭಾ ಅತಿಥಿಗೃಹದಲ್ಲಿ ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನಂದಿನಿ, ದಿನದ 8 ಗಂಟೆ ಅಧ್ಯಯನ ಮಾಡುತ್ತಿದ್ದೆ. ಎರಡು ದಿನಪತ್ರಿಕೆಗಳನ್ನು ವಿಶ್ಲೇಷಣೆ ಮಾಡಿ ಓದುತ್ತಿದೆ. ನಾನು ಟಾಪರ್ ಆಗುತ್ತೇನೆ ಎಂದು ನನ್ನ ಕುಟುಂಬದವರು, ಸ್ನೇಹಿತರು ಹೇಳುತ್ತಿದ್ದರೂ, ನನಗೆ 50 ರ್ಯಾಂಕ್ ಒಳಗಡೆ ಅಂಕ ಗಳಿಸುವ ನಿರೀಕ್ಷೆಯಿತ್ತು. ಸಮಾಜಕ್ಕೆ ನಮ್ಮ ಮಗಳು ಕೊಡುಗೆ ನೀಡಬೇಕು ಎನ್ನುವ ತಂದೆ ತಾಯಿಯ ಉದ್ದೇಶವು ನನಗೆ ಉತ್ತೇಜನ ನೀಡಿದೆ. ಬಾಲ್ಯದಿಂದಲೇ ಕನ್ನಡ ಸಾಹಿತ್ಯದೊಂದಿಗಿನ ಒಡನಾಟವು ಕೂಡ ಸಾಧನೆಯ ಮೇಲೆ ಪ್ರಭಾವ ಬೀರಿತು. ಈ ಹಿಂದೆ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರುತ್ತಿರುವುದರಿಂದ ನನ್ನ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಾಯಿತು .ಕಡಿಮೆ ಸಮಯದಲ್ಲಿ ಹೇಗೆ ನಾವು ಪರೀಕ್ಷೆ ಬರೆಯಬಹುದು ಎನ್ನುವುದನ್ನೂ ಕಲಿತೆ.
ಜನರಿಗೆ ಐಎಎಸ್, ಐಪಿಎಸ್ ಪಡೆಯುವುದಕ್ಕೆ ಬಹಳಷ್ಟು ಖರ್ಚಾಗುತ್ತದೆ. ಅಧ್ಯಯನ ಕಬ್ಬಿಣದ ಕಡಲೆ ಎನ್ನುವ ತಪ್ಪು ಕಲ್ಪನೆ ಮೊದಲು ಹೋಗಬೇಕು. ಗುರಿಯಲ್ಲಿ ಸ್ಪಷ್ಟತೆ, ಅಧ್ಯಯನದಲ್ಲಿ ಪರಿಪಕ್ವತೆಯಿದ್ದಲ್ಲಿ ಮನೆಯಲ್ಲಿ ಇದ್ದುಕೊಂಡೇ ಯುಪಿಎಸ್ಸಿ ಉತ್ತಮ ಅಂಕ ಮಾಡಬಹುದು. ಶಾಲಾ ಕಾಲೇಜು ಹಂತದಲ್ಲೇ ಯುಪಿಎಸ್ಸಿ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜ್ಞಾನ ನೀಡುವಂತಾಗಬೇಕು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನನ್ನಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸಿದೆ. ನಾನು ಆಳ್ವಾಸ್ನ ಉಚಿತ ಶಿಕ್ಷಣ ಯೋಜನೆಯ ವಿವಿದ್ಯಾರ್ಥಿನಿಯಾಗಿದ್ದ ಕಾರಣ ಐಎಎಸ್ ವೃತ್ತಿ ಜೀವನದ ಮೊದಲ ಸಂಬಳವನ್ನು ಆಳ್ವಾಸ್ನ ಉಚಿತ ಯೋಜನೆಗೆ ನೀಡುತ್ತೇನೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಕೆಲಸವನ್ನು ಮಾಡುತ್ತೇನೆ ಎಂದರು.

ನಂದಿನಿಯ ತಾಯಿ ವಿಮಲಮ್ಮ, ತಂದೆ ಕೆ.ವಿ ರಮೇಶ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಈ ಸಂದರ್ಭದಲ್ಲಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English