ದಕ್ಷಿಣ ಕನ್ನಡ ಜಿಲ್ಲಾ ರೈಫಲ್ ಸಂಘ ಅಸ್ತಿತ್ವಕ್ಕೆ

10:12 AM, Wednesday, September 15th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಇಲ್ಲಿಯವರೆಗೆ ನಾಗರೀಕ ಬಂದೂಕು ತರಬೇತಿ ಶಿಬಿರಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗುತಿತ್ತು. ಈ ಹಿಂದಿನ ನಾಗರೀಕ ಬಂದೂಕು ತರಬೇತಿ ಶಿಬಿರ ( ಆಗಸ್ಟ್-2010) ದಲ್ಲಿ ಹೇಳಿದ್ದಂತೆ ದಿನಾಂಕ : 13.09.2010 ರಂದು ದಕ್ಷಿಣ ಕನ್ನಡ ಜಿಲ್ಲಾ ರೈಫಲ್ ಸಂಘ (Dakshina Kannada District Rifle Association) ಈ ಕೆಳಗಿನ ಲಾಂಛನದೊಂದಿಗೆ ಅಸ್ತಿತ್ವಕ್ಕೆ ಬಂದಿರುತ್ತದೆ. ಸದರಿ  ಸಂಘವನ್ನು Karnataka Societies Registration Act -1960 -1960 ರ ಅನ್ವಯ ಸಹಕಾರಿ ಸಂಘಗಳ ಉಪ ನಿಬಂಧಕರು, ದ.ಕ. ಜಿಲ್ಲೆ, ಮಂಗಳೂರು ಇವರಲ್ಲಿ ನೊಂದಾಯಿಸಲಾಗಿರುತ್ತದೆ. ನೊಂದಾವಣೆ ಸಂಖ್ಯೆ : DKM / S 120/2010-11 ದಿನಾಂಕ :13.09.2010 ಆಗಿದ್ದು, ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲೆ, ಇವರು ಸಂಘದ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಉಳಿದಂತೆ ಆರ್.ಪಿ.ಐ., ಡಿ.ಎ.ಆರ್, ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲೆ, ಮಂಗಳೂರು ಇವರು ಪದನಿಮಿತ್ತ ಉಪಾಧ್ಯಕ್ಷರಾಗಿದ್ದು, ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲೆಯ ನಾಗರೀಕರುಗಳು ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು ನಿರ್ದೇಶಕರಾಗಿರುತ್ತಾರೆ. ಜಿಲ್ಲೆಯಿಂದ  ಪ್ರಸ್ತುತ ಸಂಘವನ್ನು 5 ಜನ ನಾಗರೀಕರಿಂದ ಪ್ರಾರಂಭಿಸಲಾಗಿರುತ್ತದೆ. ಅರ್ಹತೆಯುಳ್ಳ ಜಿಲ್ಲೆಯ ನಾಗರೀಕರು ಇಚ್ಛೆಯಿದ್ದಲ್ಲಿ ಸಂಘಕ್ಕೆ ಸೇರಬಹುದಾಗಿರುತ್ತದೆ.ಇನ್ನು ಮುಂದೆ ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲೆಯಲ್ಲಿನ ನಾಗರೀಕ ಬಂದೂಕು ತರಬೇತಿ ಶಿಬಿರಗಳನ್ನು, ಸಂಘದ ವತಿಯಿಂದಲೇ ಆಯೋಜಿಸಲಾಗುತ್ತದೆ. ಅಲ್ಲದೇ ಜಿಲ್ಲೆಯ ನಾಗರೀಕರು ಬಂದೂಕು ಉಪಯೋಗಿಸುವ ಬಗ್ಗೆ ತರಬೇತಿ ಮಾತ್ರವಲ್ಲದೇ ಪೊಲೀಸ್ ನಾಗರೀಕರ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಕೂಡ ಕಾರ್ಯನಿರ್ವಹಿಸಲಿದೆ. ಮತ್ತು ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಗುರಿ ಸ್ಪರ್ಧೆಗಳಿಗೆ ಭಾಗವಹಿಸಲು ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲೆಯ ನಾಗರೀಕರಿಗೆ ಸಂಘವು ಮೊದಲ ಮೆಟ್ಟಿಲಾಗಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English