ಸುಬ್ರಹ್ಮಣ್ಯ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಆಪ್ತ ಸಹಾಯಕ ಶಕುಂತ್ ಆಪ್ಟೆ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು. ಇವರೊಂದಿಗೆ ಪುಣೆಯ ಸಾಂಗ್ಲಿಯ ಲೋಕಸಭಾ ಸದಸ್ಯ ಸಂಜಯ್ ರಾಮಚಂದ್ರ ಪಾಟಿಲ್ ಹಾಗೂ ಜ್ಯೋತಿ ಸಂಜಯ್ ಪಾಟೀಲ್ ಮತ್ತು ಮಂಜುಶ್ರೀ ಆಗಮಿಸಿದ್ದರು.
ಮಂಗಳವಾರ ಕ್ಷೇತ್ರಕ್ಕೆ ಆಗಮಿಸಿದ ಆಪ್ಟೆ ಮತ್ತು ಸಂಜಯ್ ಪಾಟೀಲ್ ಮಹಾಪೂಜೆಗೆ ಸಂಕಲ್ಪ ನೆರವೇರಿಸಿದರು. ವೇದಮೂರ್ತಿ ಮಧುಸೂಧನ ಕಲ್ಲೂರಾಯ ಸಂಕಲ್ಪ ವಿದಿ ವಿಧಾನ ನೆರವೇರಿಸಿದರು. ಬಳಿಕ ಆಪ್ಟೆ ಅವರು ಮಹಾಪೂಜೆ ಸೇವೆ ನೆರವೇರಿಸಿದರು. ಅಲ್ಲದೆ ಸಂಜಯ್ ಪಾಟೀಲ್ ಅವರು ಶ್ರೀ ದೇವರಿಗೆ ಚಿನ್ನದ ಹರಕೆ ಅರ್ಪಿಸಿದರು. ಅಲ್ಲದೆ ಶ್ರೀ ದೇವಳದಲ್ಲಿ ಶಾಶ್ವತ ಸೇವೆ ನೆರವೇರಿಸುವ ಸಂಕಲ್ಪ ಮಾಡಿದರು. ಶ್ರೀ ದೇವಳಕ್ಕೆ ಭೇಟಿ ನೀಡಿದ ಇವರಿಗೆ ಶ್ರೀ ದೇವಳದ ಅರ್ಚಕ ರಾಜೇಶ್ ನಡ್ಯಂತ್ತಿಲ್ಲಾಯ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಬಳಿಕ ಹೊಸಳಿಗಮ್ಮ ದೇವಿಯ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.
ಇವರೊಂದಿಗೆ ಕೇರಳದ ಖ್ಯಾತ ಜ್ಯೋತಿಷ್ಯ ಮಾಧವ ಪೊದುವಾಳ್, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಗಣೇಶ್ ಕಾಶಿಕಟ್ಟೆ ಉಪಸ್ಥಿತರಿದ್ದರು. ಕ್ಷೇತ್ರಕ್ಕೆ ಆಗಮಿಸಿದ ಇವರನ್ನು ಶಿಷ್ಠಾಚಾರ ವಿಭಾಗದ ಗೋಪಿನಾಥ್ ನಂಬೀಶ ಮತ್ತು ಪ್ರಮೋದ್ ಕುಮಾರ್ ಎಸ್ ಸ್ವಾಗತಿಸಿದರು.
Click this button or press Ctrl+G to toggle between Kannada and English