ಕಾಂಗ್ರೆಸ್ ಪಕ್ಷದ ಬೆಂಬಲಿಗರಾದ ಅಲ್ಪ ಸಂಖ್ಯಾತರನ್ನೆ ಗುರಿಯಿಟ್ಟು ಹಲ್ಲೆ ನಡೆಸಲಾಗುತ್ತಿದೆ : ಪಿ.ವಿ. ಮೋಹನ್

7:14 PM, Friday, June 16th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

PV Mohanಮಂಗಳೂರು : ಕಲ್ಲಡ್ಕ ಚೂರಿ ಪ್ರಕರಣಕ್ಕೆ ಕೋಮು ಬಣ್ಣವನ್ನು ಹಚ್ಚಿ ಜನರನ್ನು ಭಾವನಾತ್ಮಕವಾಗಿ ಉನ್ಮಾದಿಸಿ ಉಭಯ ಜಿಲ್ಲೆಗಳಲ್ಲಿ ಕೋಮು ಬೆಂಕಿ ಹಾಕಿ, ಶಾಂತಿ ಕೆದಡಿಸಿ ಸರಕಾರದ ಹೆಸರನ್ನು ಕೆಡಿಸುವ ಪ್ರಯತ್ನವನ್ನೂ ಆರ್.ಎಸ್.ಎಸ್. ಮತ್ತು ಬಿಜೆಪಿ ಪಕ್ಷ ಮಾಡುತ್ತಿದೆ.  ಕಾಂಗ್ರೆಸ್ ಪಕ್ಷದ ಬೆಂಬಲಿಗರಾದ ಅಲ್ಪ ಸಂಖ್ಯಾತರನ್ನೆ ಗುರಿಯಿಟ್ಟು ಬೆದರಿಸಿ, ಹಲ್ಲೆ ನಡೆಸಿ ಅವರನ್ನು ಗಲಭೆಗಳಿಗೆ ಆರ್.ಎಸ್.ಎಸ್.ನ ಬೆಂಬಲಿಗರು ಪ್ರಚೋದಿಸುತ್ತಿದ್ದಾರೆ.  ಇದಕ್ಕೆ ಕುಮಕ್ಕು ನೀಡುತ್ತಿರುವ ಸೂತ್ರಧಾರಿಗಳನ್ನು ಮೀನ ಮೇಷ ಮಾಡದೆ ಕೂಡಲೇ ಬಂಧಿಸಬೇಕೆಂದು ಎಐಸಿಸಿ ಸದಸ್ಯರಾದ ಪಿ.ವಿ. ಮೋಹನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಲ್ಲಡ್ಕದಲ್ಲಿ ಪದೇ ಪದೇ ಕೋಮು ಪ್ರಕರಣಗಳು ಮರುಕಳಿಸುತ್ತಿದೆ. ಇಡೀ ಪ್ರದೇಶವು ಭಯದ ವಾತಾವರಣವಿದೆ. ಇಲ್ಲಿಇರುವ ಆರ್.ಎಸ್.ಎಸ್.ನ ಮುಖಂಡ ಪ್ರಭಾಕರ ಭಟ್ ಅವರು ದ್ವೇಷ ಪೂರಿತ ಹೇಳಿಕೆ ಮತ್ತು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ.  ಅವರನ್ನು ಬಂಧಿಸಿ ತನಿಖೆ ನಡೆಸಬೇಕೆಂದು ಪಿ.ವಿ. ಮೋಹನ್ ಒತ್ತಾಯಿಸಿದ್ದಾರೆ.

ಕಲ್ಲಡ್ಕ ಪ್ರಕರಣದಲ್ಲಿ ಪೋಲೀಸರಿಂದ ಪಕ್ಷಪಾತಿ ಧೋರಣೆಯಾಗಿದೆ ಎಂದು ದೂರು ಇದೆ. ಅಮಾಯಕರನ್ನು ಕೂಡಲೇ ಬಿಡುಗಡೆ ಗೊಳಿಸಬೇಕು. ಮಹಿಳಾ ಪೋಲೀಸರನ್ನು ಬಳಸದೆ ಮಧ್ಯರಾತ್ರಿಯಲ್ಲಿ ಮನೆಗೆ ನುಗ್ಗಿ ಮಹಿಳೆಯರನ್ನು ನೋಯಿಸಿದ ಪೋಲೀಸರನ್ನು ಅಮಾನತುಗೊಳಿಸಬೇಕೆಂದು ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English