ಮಂಗಳೂರು: ಅದಿರು ವ್ಯಾಪಾರಿಯಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಅಧಿಕಾರಿ ವೀರಣ್ಣ ನಾಯಕ್ ಮತ್ತು ಲೆಕ್ಕ ಪರಿಶೋಧಕ ನರಸಿಂಹ ಅವರನ್ನು ಶುಕ್ರವಾರ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆ. 26 ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.
ಗುರುವಾರ ಸಂಜೆ ಅದಿರು ವ್ಯಾಪಾರಿ ಅತ್ತಾವರದ ಮಹಮದ್ ಅವರ ದಾಖಲೆ ಪತ್ರಗಳ ಕ್ಲಿಯರೆನ್ಸ್‌ಗೆ 1.5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ವೀರಣ್ಣ ನಾಯಕ್ ಮತ್ತು ನರಸಿಂಹ ಅವರನ್ನು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.
Click this button or press Ctrl+G to toggle between Kannada and English