ಬೆಳ್ತಂಗಡಿ : ಬೇಲಿ ಹಾಕಲು ಸೊಸೆ ಮತ್ತು ಇಬ್ಬರು ಮಕ್ಕಳ ಮೇಲೆ ಹಲ್ಲೆ ಮಾಡಿದ ಅತ್ತೆ

2:18 PM, Tuesday, June 20th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Belthangadyಬೆಳ್ತಂಗಡಿ :  ಆಸ್ತಿ ವಿಚಾರದಲ್ಲಿ ತನ್ನ ಸೊಸೆ ಮತ್ತು ಇಬ್ಬರು ಮಕ್ಕಳ ಮೇಲೆ ಅತ್ತೆ ಮತ್ತು ನಾದಿನಿ ಅಮಾನುಷ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ರಾಧಮ್ಮ ಎಂಬುವರು ನಾದಿನಿ ಯೊಂದಿಗೆ ಸೇರಿ  ಸೊಸೆ ಮತ್ತು ಇಬ್ಬರು ಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಿರುವ ವಿಡಿಯೋ ಸಾಮಾಜಿಕ ತಾಣ ದಲ್ಲಿ ಹರಿದಾಡುತ್ತಿದೆ.

ಕೊಯ್ಯೂರು ಗ್ರಾಮದ ನೆಕ್ಕರಕೋಡಿ ಎಂಬಲ್ಲಿ ಭಾನುವಾರ ಜಾಗಕ್ಕೆ ಬೇಲಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಹಾಗೂ ಮಗನ ನಡುವೆ ಗಲಾಟೆ ನಡೆದಿತ್ತು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಜಾಗಕ್ಕೆ ಬೇಲಿ ಹಾಕಲು ಮುಂದಾಗುವ ವೇಳೆ ಅದಕ್ಕೆ ತಡೆಯೊಡ್ಡಲಾಗಿತ್ತು. ತನ್ನ ಮಗನ ವಶದಲ್ಲಿರುವ ಜಾಗಕ್ಕೆ ಬೇಲಿ ಹಾಕಲು ತಂದೆ-ತಾಯಿ ಮುಂದಾಗಿದ್ದರು ಎನ್ನಲಾಗಿದೆ. ಈ ವೇಳೆ ಜೆಸಿಬಿಗೆ ಅಡ್ಡಲಾಗಿ ಸೊಸೆ, ಇಬ್ಬರು ಎಳೆಯ ಮಕ್ಕಳು ನಿಂತಿದ್ದರು.

ಒಂದು ವರ್ಷದ ಮಗುವನ್ನು ಎತ್ತಿಕೊಂಡು ಇನ್ನೊಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ನಿಂತಿದ್ದ ಸೊಸೆ ಬಳಿಗೆ ಹೋದ ಅತ್ತೆ ಮತ್ತು ನಾದಿನಿ ಕೈಯಲ್ಲಿ ಹಿಡಿದಿದ್ದ ಮಗುವನ್ನು ತಾಯಿಯಿಂದ ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ. ಅಳುತ್ತಿದ್ದ ಇನ್ನೊಂದು ಮಗುವನ್ನು ಪಕ್ಕಕ್ಕೆ ದೂಡಿದ್ದಾರೆ. ಬಳಿಕ ಪುಟ್ಟ ಮಗುವನ್ನು ಎತ್ತಿಕೊಂಡು ನಿಂತಿದ್ದ ಸೊಸೆ ಮೇಲೆ ಹಲ್ಲೆ ನಡೆಸಿದ್ದಾರೆ. ಅಳುತ್ತಿದ್ದ ಮಗುವಿನೊಂದಿಗೆ ಆಕೆಯನ್ನು ದೂಡಿ ಜೆಸಿಬಿ ಹೋಗಲು ಅನುವು ಮಾಡಿಕೊಡುತ್ತಿರುವುದು ವಿಡಿಯೋದಲ್ಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English