ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಎಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಇದೀಗ ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಘೋಷಣೆ ಮಾಡಬೇಕು ಎಂಬ ಚರ್ಚೆಗಳು ಆರಂಭವಾಗಿವೆ.
ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಘೋಷಿಸಬೇಕು ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಸಹ ವ್ಯಕ್ತಪಡಿಸಿ ಕಮೆಂಟ್ ಹಾಗೂ ಟ್ವೀಟ್ ಮಾಡುತ್ತಿದ್ದಾರೆ.
ಇಂತಹ ಚರ್ಚೆಯನ್ನು ಇಂಗ್ಲಿಷ್ ಸುದ್ದಿ ವಾಹಿನಿ ನ್ಯೂಸ್ ಎಕ್ಸ್ ಹುಟ್ಟು ಹಾಕಿದ್ದು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟರ್ ಗಳಲ್ಲಿ ಈ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ತಮಿಳು ನಿರ್ದೇಶಕ ರಾಧಕೃಷ್ಣನ್ ಪರ್ತಿಬನ್ ಅವರು ದಿ ಹಿಂದೂ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾಗ ಕೈಯಲ್ಲಿ ಹಣವಿಲ್ಲದೆ ನಿತ್ಯವು ಉಪ್ಪಿಟ್ಟು ತಿಂದು ಜೀವನ ಸಾಗಿಸುತ್ತಿದ್ದೇ. ಇಂದು ಕೂಡ ಸಾಕಷ್ಟು ಜನರ ಸಹ ನಿರ್ದೇಶಕರು ಉಪ್ಪಿಟ್ಟಿನ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಉಪ್ಪಿಟ್ಟನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಘೋಷಣೆ ಮಾಡಬೇಕು ಎಂದು ತಮಾಷೆ ಮಾಡಿದ್ದರು.
Click this button or press Ctrl+G to toggle between Kannada and English