ಅಮೆರಿಕಾದಲ್ಲಿ ಡಾ. ಹೆಗ್ಗಡೆಯವರಿಂದ ಎಸ್.ಡಿ.ಎಂ. ಐ.ಎಂ.ಡಿ ಯ ಅಂತರರಾಷ್ಟ್ರೀಯ ಮಾನ್ಯತೆಯ ಪ್ರಶಸ್ತಿ  ಸ್ವೀಕಾರ

9:02 PM, Wednesday, June 28th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Heggadeಉಜಿರೆ   : ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ ಸಂಸ್ಥೆಯ (SDMIMD) ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ  ಇನ್ ಮ್ಯಾನೇಜ್ಮೆಂಟ್ (PGDM) ಕೋರ್ಸಿಗೆ ಅಮೆರಿಕಾದ  ಅಕ್ರೆಡಿಟೇಷನ್ ಕೌನ್ಸಿಲ್ ಫಾರ್ ಬಿಸಿನೆಸ್ ಸ್ಕೂಲ್ಸ್ ಅಂಡ್ ಪ್ರೋಗ್ರಾಮ್ಸ್ (ACBSP) ಅವರಿಂದ ಮಾನ್ಯತೆಯ ಪ್ರಶಸ್ತಿ ದೊರಕಿದೆ.

ಜೂನ್ 26, ಸೋಮವಾರ  ಅಮೆರಿಕಾದ ಲಾಸ್ ಏಂಜಲೀಸ್ ನ ಅನಹೆಮ್ ನಗರದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಸಂಸ್ಥೆಯ ನಿರ್ದೇಶಕರಾದ ಡಾ. ಎನ್.ಆರ್. ಪರಶುರಾಮನ್‌ರೊಂದಿಗೆ ಡಾ. ಸ್ಟೀವ್ ಪಾರ್ಸ್ಕೆಲ್, ಚೀಫ್ ಅಕ್ರೆಡಿಟೇಷನ್ ಆಫೀಸರ್ ಹಾಗೂ ಡಾ. ರೇ ಎಲ್ಡ್ರಿಡ್ಜ್, ಅಧ್ಯಕ್ಷರು, ಬೋರ್ಡ್ ಆಫ್ ಕಮಿಷನರ್ಸ್ ಅವರಿಂದ ಮಾನ್ಯತೆಯ ಪ್ರಶಸ್ತಿ  ಸ್ವೀಕರಿಸಿದರು.

ಭಾರತದಲ್ಲಿ ಇರುವ ‘ಬಿ’ ಶಾಲೆಗಳ ಪೈಕಿ ಯುರೋಪಿಯನ್ ಫೌಂಡೇಶನ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ (EFMD) ಮತ್ತು ACBSP – ಈ ಎರಡೂ ಮಾನ್ಯತೆಗಳನ್ನು ಪಡೆದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಎಸ್.ಡಿ.ಎಂ. ಐ.ಎಂ.ಡಿ ಪಾತ್ರವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English