ಮಂಗಳೂರು ಪ್ರೆಸ್‌‌ ಕ್ಲಬ್‌‌ನಲ್ಲಿ ಪತ್ರಿಕಾ ದಿನಾಚರಣೆ

9:13 PM, Saturday, July 1st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

patrika dinacharane ಮಂಗಳೂರು : ಮಂಗಳೂರಿನ ವರದಿಗಾರರು ರಾಜಧಾನಿಯ ವರದಿಗಾರರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಇಲ್ಲಿನವರು ವಿಭಿನ್ನವಾಗಿ ಯೋಚಿಸುವ ಕೌಶಲ್ಯ ಹೊಂದಿದ್ದಾರೆ ಎಂದು ಬೆಂಗಳೂರು ಪ್ರೆಸ್‌‌ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳೂರು ಪ್ರೆಸ್‌‌ ಕ್ಲಬ್‌‌ನಲ್ಲಿ ಇಂದು ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವರದಿಗಾರರ ಬರಹ ಜನರ ಬದುಕಲ್ಲಿ ಪರಾರಿಣಾಮ ಬೀರುವಂತಿರಬೇಕು. ಸುದ್ದಿಯ ಸತ್ಯಾಸತ್ಯತೆಯನ್ನು ಅರಿತು ಜನರಿಗೆ ಅರ್ಥೈಸುವ ಕೆಲಸವವನ್ನು ವರದಿಗಾರರು ಮಾಡಬೇಕು ಎಂದು ಸಲಹೆ ನೀಡಿದರು.

ಮಾಧ್ಯಮಗಳ ಹೊಸ ಆಯಾಮಗಳ ಬಗ್ಗೆ ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಕುಂಠಿನಿ ಉಪನ್ಯಾಸ ನೀಡಿದರು.

ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ, ಪತ್ರಕರ್ತ ಪುಷ್ಪರಾಜ್ ಬಿ. ಎನ್. ಇತರರು ಕಾರ್ಯಕ್ರಮದಲ್ಲಿದ್ದರು.

ವಿಧಾನಸಭೆ ಹಕ್ಕು ಬಾಧ್ಯತೆಗಳ ಸಮಿತಿಯು ಪತ್ರಕರ್ತರಾದ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಬಂಧನಕ್ಕೆ ಸೂಚಿಸಿದ್ದನ್ನು ಖಂಡಿಸಿ ಇದೇ ವೇಳೆ ಪತ್ರಕರ್ತರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

patrika

 

patrika dinacharane

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English