ಮಂಗಳೂರು : ಫಳ್ನೀರ್ ರಸ್ತೆಯ ಮನೆಯೊಂದರಲ್ಲಿ ಕೆಲಸಕ್ಕಿದ್ದ ತಮಿಳು ಮೂಲದ ಗಂಡ ಹೆಂಡತಿ ಎಟಿಎಂ ಹಾಗೂ ಪಾಸ್‌ವರ್ಡ್ ಬರೆದಿಟ್ಟಿದ್ದ ಡೈರಿ ಕದ್ದು ಸುಮಾರು 3.59 ಲಕ್ಷ ನಗದು ಡ್ರಾ ಮಾಡಿ ತಲೆ ಮರೆಸಿಕೊಂಡಿದ್ದ ಪ್ರಕರಣಕ್ಕೆ ಸಂಭಂದಿಸಿದಂತೆ ದಂಪತಿಯನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ತಮಿಳುನಾಡು ವೆಲ್ಲೂರಿನ ಫಾತಿಮಾ (28) ಹಾಗೂ ಆಕೆಯ ಪತಿ ಸೆಲ್ವಂ (31) ಎಂದು ಗುರುತಿಸಲಾಗಿದೆ. ಬಂಧಿತರಿಂದ 2.20 ಲಕ್ಷ ನಗದು ಹಾಗೂ ಡ್ರಾ ಮಾಡಿದ ಹಣದಿಂದ ಖರೀದಿಸಿದ 20 ಗ್ರಾಂ ತೂಕದ ಚಿನ್ನದ ಸರವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಫಳ್ನೀರ್ ಬ್ರಿಟ್ಟೋ ಲೇನ್ನ ಜೋಯ್ಸ್ ಎಂಬವರ ಮನೆಯಲ್ಲಿ ಕೆಲವು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಫಾತಿಮಾ ಏ. 14ರಿಂದ ಕೆಲಸ ಬಿಟ್ಟಿದ್ದಳು. ಇದೇ ವೇಳೆ ಜೋಯ್ಸ್ ವಿದೇಶಕ್ಕೆ ಹೋಗಿದ್ದರು. ಫಾತಿಮಾ ಕೆಲಸಕ್ಕಿದ್ದ ವೇಳೆ ಎಟಿಎಂ ಕಾರ್ಡ್ ಹಾಗೂ ಪಾಸ್‌ವರ್ಡ್ ಬರೆದಿಟ್ಟಿದ್ದ ಡೈರಿ ಎಗರಿಸಿ, ಮೇ 16ರಿಂದ ಜೂ. 22ರ ಅವಧಿಯಲ್ಲಿ ಒಟ್ಟು 3.50 ಲಕ್ಷ ಹಣ ಡ್ರಾ ಮಾಡಿದ್ದರು. ಜೋಯ್ಸ್ ಸ್ವದೇಶಕ್ಕೆ ಮರಳಿದ ಬಳಿಕ ವಂಚನೆ ಬೆಳಕಿಗೆ ಬಂದಿದೆ.
ಮಂಗಳೂರು ದಕ್ಷಿಣ ಠಾಣೆಯ ಇನ್ಸ್‌ಪೆಕ್ಟರ್ ಬೆಳ್ಳಿಯಪ್ಪ ಮತ್ತು ಅವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
Click this button or press Ctrl+G to toggle between Kannada and English