ಮಲೇರಿಯಾ ಉತ್ಪತ್ತಿ ತಾಣಗಳಿಗೆ ಮಹಾನಗರ ಪಾಲಿಕೆಯ ವತಿಯಿಂದ ದಾಳಿ

7:36 PM, Wednesday, July 5th, 2017
Share
1 Star2 Stars3 Stars4 Stars5 Stars
(No Ratings Yet)
Loading...

Malaria ಮಂಗಳೂರು : ಮಹಾನಗರ ಪಾಲಿಕೆಯ ವತಿಯಿಂದ ಈಗಾಗಲೇ ಗುರುತಿಸಲಾಗಿರುವ ಮಲೇರಿಯಾ ಉತ್ಪತ್ತಿ ತಾಣಗಳಿಗೆ ದಾಳಿ ನಡೆಸಿ ದಂಡ ವಿಧಿಸುವುದು ಹಾಗೂ ಕಟ್ಟಡ ಪರವಾನಿಗೆ ರದ್ದು ಪಡಿಸುವ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಎಚ್ಚರಿಸಿದ್ದಾರೆ.

ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡಿದ ಮೇಯರ್ ಮಲೇರಿಯಾ ಹಾಗೂ ಡೆಂಗ್ಯೂ ನಂತಹ ಸಾಂಕ್ರಾಮಿಕ ರೋಗಗಳಿಂದ ಮಂಗಳೂರು ಮಹಾನಗರ ಪಾಲಿಕೆಯ ಜನರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ .

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮಲೇರಿಯಾ ರೋಗ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದರೂ ನಗರದಲ್ಲಿ ಹಲವೆಡೆ ಮಲೇರಿಯಾ ಉತ್ಪತ್ತಿ ತಾಣಗಳನ್ನು ಗುರುತಿಸಿ ಕಳೆದ ಜೂನ್‌ನಲ್ಲಿ ನೋಟಿಸು ನೀಡಲಾಗಿದೆ. ಆದರೆ ಕೆಲವರಿಂದ ಯಾವುದೇ ಸ್ಪಂದನೆಯೂ ವ್ಯಕ್ತವಾಗಿಲ್ಲ. ಹಾಗಾಗಿ ಇದೀಗ ಕಟ್ಟುನಿಟ್ಟಿನ ಕ್ರಮಕ್ಕೆ ಮನಪಾ ಸಿದ್ಧತೆ ನಡೆಸಿದೆ ಎಂದರು.

2016ರಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ 1,71,701 ಮಂದಿ ಮಲೇರಿಯಾ ತಪಾಸಣೆಗೊಳಪಟ್ಟಿದ್ದು, ಅವರಲ್ಲಿ 11,037 ಮಂದಿಗೆ ಮಲೇರಿಯಾ ರೋಗ ಪತ್ತೆಯಾಗಿತ್ತು. 2017ರಲ್ಲಿ ಜನವರಿಯಿಂದ ಜೂನ್‌ವರೆಗೆ 76,537 ಮಂದಿಯನ್ನು ಮಲೇರಿಯಾ ತಪಾಸಣೆಗೊಳಪಡಿಸಲಾಗಿದ್ದು, ಅವರಲ್ಲಿ 2,448 ಮಂದಿಯಲ್ಲಿ ಮಲೇರಿಯಾ ಪತ್ತೆಯಾಗಿದೆ.

ನಗರದಲ್ಲಿ 6 ಡೆಂಗ್ ಪ್ರಕರಣಗಳು ಕದ್ರಿ ಹಾಗೂ ದೇರೆಬೈಲ್‌ನಲ್ಲಿ ಜೂನ್ ತಿಂಗಳಲ್ಲಿ ಪತ್ತೆಯಾಗಿದ್ದು, ಸುರತ್ಕಲ್ (ಪಶ್ಚಿಮ), ಇಡ್ಯಾ-1 (ಪೂರ್ವ), ದೇರೆಬೈಲ್1 (ಉತ್ತರ), ಕದ್ರಿ-1 (ಪದವು), ದೇರೆಬೈಲ್ 2 (ಪೂರ್ವ), ದೇರೆಬೈಲ್ 3 (ದಕ್ಷಿಣ), ಬಿಜೈ, ಕದ್ರಿ 3 (ದಕ್ಷಿಣ), ಪದವು 2 (ಕೇಂದ್ರ), ಪದವು 3 (ಪೂರ್ವ), ಕೇಂದ್ರ ಮಾರುಕಟ್ಟೆ, ಬಂದರು, ಪೋರ್ಟ್, ಮಿಲಾಗ್ರೀಸ್, ಅತ್ತಾವರ, ಮಂಗಳಾದೇವಿ, ಹೊಯ್ಗೆಬಜಾರ್, ಬೋಳಾರ, ಬೆಂಗರೆ ಇವು ಅತೀ ಸೂಕ್ಷ್ಮ ವಾರ್ಡ್‌ಗಳಾಗಿವೆ ಎಂದವರು ಹೇಳಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English