ಮಂಗಳೂರು : ಜೂಜು ಆಡುವ ಮೂಲಕ ಆಡುವವರು ಮತ್ತು ಆಡಿಸುವವರು ಸುಲಭದಲ್ಲಿ ದುಡ್ಡು ಮಾಡಬಹುದು. ಒಮ್ಮೆ ಜೂಜು ಆಡಲು ಸುರು ಮಾಡಿದರೆ ಮನೆ, ಅಸ್ತಿ ಎಲ್ಲವನ್ನು ಕಳಕೊಂಡೇ ಜನ ಆಟ ನಿಲ್ಲಿಸುವುದು. ಜನರನ್ನು ಸುಲಿಗೆ ಮಾಡುವ ಅಂತಹ ಆಟದ ಅಡ್ಡೆಗಳು ಮಂಗಳೂರಿನಲ್ಲಿ 80 ಕ್ಕೂ ಹೆಚ್ಛೇ ಇದೆ ಎಂದು ಹೇಳಲಾಗಿದೆ. ಅಂತಹ ಜೂಜು ಕೇಂದ್ರಗಳಿಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮಂಗಳೂರಿನ ಮೇಯರ್ ಕವಿತಾಸನಿಲ್ ಗುರುವಾರ ಸಂಜೆ ಮಹತ್ವದ ಕಾರ್ಯಾಚರಣೆಯೊಂದನ್ನು ನಡೆಸಿದರು.
ಸಂಜೆ 5 ಗಂಟೆ ಹೊತ್ತಿಗೆ ಮೇಯರ್ ಕವಿತಾ ಸನಿಲ್ ಅವರು ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ ಮತ್ತು ಅಧಿಕಾರಿಗಳೊಂದಿಗೆ ಜ್ಯೋತಿ ಸರ್ಕಲ್ ಬಳಿ ಇರುವ ಸ್ಮಾರ್ಟ್ ಟವರ್ ಕಟ್ಟಡದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಸ್ಕಿಲ್ ಗೇಮ್ ಕೇಂದ್ರಕ್ಕೆ ಹಠಾತ್ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಮೇಯರ್ ಹಾಗೂ ಅಧಿಕಾರಿಗಳನ್ನು ಕಂಡು ಕೇಂದ್ರದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ನೂರಾರು ಮಂದಿ ಒಡಲು ಆರಂಭಿಸಿದರು. ಜೂಜು ಕೇಂದ್ರವನ್ನು ನಡೆಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಕೇಂದ್ರಕ್ಕೆ ಬೀಗ ಜಡಿಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ಮಾರ್ಟ್ ಟವರ್‌ನ ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್‌ಗಾಗಿ ಒದಗಿಸಲಾಗಿದ್ದ ಸ್ಥಳದಲ್ಲಿ ಈ ಸ್ಕಿಲ್ ಗೇಮ್ ಎಂಬ ಹೆಸರಿನಲ್ಲಿ ಜೂಜು ಕೇಂದ್ರ ನಡೆಯುತ್ತಿದೆ. ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಕವಿತಾ ಸನಿಲ್ ಅವರು, ಕೇಂದ್ರವು ಅಕ್ರಮವಾಗಿ ನಡೆಯುತ್ತಿದ್ದು, ಯಾವುದೇ ಪರವಾನಿಗೆಯನ್ನು ಹೊಂದಿಲ್ಲ ಎಂದು ಮೇಯರ್ ಹೇಳಿದರು. ‘‘ತನ್ನ ಮಗ ನಿತ್ಯ ಮನೆಯಿಂದ ಹಣ ತೆಗೆದುಕೊಂಡು ಹೋಗಿ ನಗರದ ಜ್ಯೋತಿ ಬಳಿ ಇರುವ ಸ್ಕಿಲ್‌ನ ಗೇಮ್‌ನಲ್ಲಿ ವ್ಯಯಿಸುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಇಂದು ಮಧಾಹ್ನ ಮೇಯರ್ ಗೆ ಫೋನ್ ಕರೆ ಮಾಡಿದ್ದರಂತೆ. ಸಾರ್ವಜನಿಕರನ್ನು ಲೂಟಿಗೈಯುವ ಇಂತಹ ಕೇಂದ್ರದ ಬಗ್ಗೆ ಕ್ರಮ ಕೈಗೊಳ್ಳುವಂತೆ ಆ ಮಹಿಳೆ ಕಣ್ಣೀರಿಟ್ಟ ಹಿನ್ನೆಲೆಯಲ್ಲಿ ಈ ಕೇಂದ್ರಕ್ಕೆ ದಾಳಿ ನಡೆಸಲಾಗಿದೆ ಎಂದು ಮೇಯರ್ ಹೇಳಿದ್ದಾರೆ.
ಮೇಯರ್ ಅವರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ಮಾಹಿತಿ ತಿಳಿಸಿದರಲ್ಲದೆ, ಅಧಿಕಾರಿಗಳನ್ನು ಕಳುಹಿಸುವಂತೆ ಮನವಿ ಮಾಡಿದರು. ಆದರೆ, ಫೋನ್ ಕರೆ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದರು. ಇವರನ್ನು ಕಂಡ ಮೇಯರ್ ‘‘ಹಿರಿಯ ಅಧಿಕಾರಿಗಳು ಬರಲಿ, ಅಷ್ಟರವರೆಗೆ ನಾವು ಇಲ್ಲೇ ಕಾಯುತ್ತಿರುತ್ತೇವೆ’’ ಎಂದರು.
ಬಳಿಕ ಕದ್ರಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಮಾರುತಿ ನಾಯಕ್ ಅವರು ಸ್ಥಳಕ್ಕೆ ಆಗಮಿಸಿದರು. ಸ್ಕಿಲ್ ಗೇಮ್ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ದಂಧೆಯ ಬಗ್ಗೆ ಪೊಲೀಸ್ ಅಧಿಕಾರಿಯವರ ಗಮನ ಸೆಳೆದರಲ್ಲದೆ, ಇಂತಹ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕುವಂತೆ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಠಾಣಾ ನಿರೀಕ್ಷಕರು ‘‘ಇದೇ ಕ್ಲಬ್‌ನ ಮೇಲೆ ಈ ಹಿಂದೆ ನಾಲ್ಕೈದು ಪ್ರಕರಣಗಳನ್ನು ದಾಖಲಿಸಿದ್ದೇವೆ. ಆದರೆ, ಇದರ ವಿರುದ್ಧ ಅವರು ಹೈಕೋರ್ಟ್‌ಗೆ ಹೋಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಿದರು.
Click this button or press Ctrl+G to toggle between Kannada and English