ಶರತ್ ಮೇಲಿನ ಕೊಲೆಯತ್ನ ಖಂಡಿಸಿ ಬಿಸಿ ರೋಡ್ ನಲ್ಲಿ ಹಿಂದೂ ಕಾರ್ಯಕರ್ತರಿಂದ ಬ್ರಹತ್ ಪ್ರತಿಭಟನೆ

8:40 PM, Friday, July 7th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Hindu protest ಬಂಟ್ವಾಳ : ನಿಷೇಧಾಜ್ಞೆ ಇದ್ದರೂ ಹಿಂದೂ ಯುವಕನಿಗೆ ಚೂರಿ ಹಾಕಿ ದುಷ್ಕರ್ಮಿಗಳು ಪರಾರಿಯಾದ ಪ್ರಕರಣವನ್ನು ಖಂಡಿಸಿ  ಹಿಂದೂ ಹಿತ ರಕ್ಷಣಾ ವೇದಿಕೆ ಹಾಗೂ ಹಲವು ಹಿಂದೂ ಸಂಘಟನೆಗಳು ಸಾವಿರಾರು ಸಂಖ್ಯೆಯಲ್ಲಿ ಬಿಸಿ ರೋಡ್ ಬಸ್ ನಿಲ್ದಾಣದ ಬಳಿ ಶುಕ್ರವಾರ  ಪ್ರತಿಭಟನೆ ನಡೆಸಿದರು.

ಮಂಗಳವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಎಂಬವರ ಮೇಲೆ ಕೊಲೆಯತ್ನ ಮಾಡಿ ಸಾವು ಬದುಕಿನ ನಡುವೆ ಹೋರಾಟನಡೆಸುತ್ತಿದ್ದು, ಈ ಕೃತ್ಯವನ್ನು ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದೆ.

ಸಂಸದರಾದ ನಳಿನ್ ಕುಮಾರ್ ಕಟೀಲು ಹಾಗೂ ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಬಿ.ಸಿ.ರೋಡಿಗೆ ಆಗಮಿಸಿ ಕೃತ್ಯವನ್ನು ಖಂಡಿಸಿದ್ದಾರೆ.

Hindu protest ಶೋಭಾ ಕರಂದ್ಲಾಜೆಯವರು  ಹಲ್ಲೆಗೊಳಗಾದ ಶರತ್ ಅವರ ಉದಯ ಲಾಂಡ್ರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘‘ಶರತ್ ಮೇಲಿನ ಹಲ್ಲೆಯನ್ನು ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇನ್ನೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ನಮ್ಮ ಪ್ರತಿಭಟನೆ ಹತ್ತಿಕ್ಕಲು ಪೊಲೀಸರನ್ನು ಬಿಟ್ಟಿದ್ದಾರೆ. ನಿಜವಾದ ಅಪರಾಧಿಗಳನ್ನು ಹಿಡಿಯುವ ಪ್ರಯತ್ನ ನಡೆದಿಲ್ಲ. ರಾಜ್ಯದಲ್ಲಿ ನಾವು ಹಲವಾರು ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ಒಂದೇ ಮಾದರಿಯ ಕೊಲೆ ಎಲ್ಲಾ ಕಡೆ ನಡೆಯುತ್ತಿದೆ. ಇದಕ್ಕೆಲ್ಲ ಕಾಂಗ್ರೆಸ್ ಕುಮ್ಮಕ್ಕೇ ಕಾರಣ’’ ಎಂದು ಆರೋಪಿಸಿದರು.

ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಹಿಂದೂ ಕಾರರ್ಯಕರ್ತರನ್ನು ಪೊಲೀಸರಿಗೆ ಬಂಧಿಸಲು ಕಷ್ಟ ವಾಯಿತು. ಬಳಿಕ ಸಂಕೇತಿಕವಾಗಿ ಬಂಧಿಸಿ ಬಿಡುಗಡೆ ಗೊಳಿಸಿದರು.

ಸಶಸ್ತ್ರ ಮೀಸಲು ಪಡೆ ಸೇರಿದಂತೆ 25ಕ್ಕೂ ಅಧಿಕ ಪೊಲೀಸ್ ಬಸ್‌ಗಳು ಬಿ.ಸಿ.ರೋಡಿನಲ್ಲಿ ಠಿಕಾಣಿ ಹೂಡಿದೆ. ಬಿ.ಸಿ.ರೋಡ್ ಮುಖ್ಯರಸ್ತೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ಕರೆಸಲಾಗಿದೆ.

ಕಿಶೋರ್ ಪೆರಾಜೆ 

Hindu protest

Hindu protest

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English